Wednesday, September 30, 2026

BDA Apartments

ಟೀಂ ಇಂಡಿಯಾ ಸರಣಿಗೆ ಶ್ರೀಲಂಕಾ ತಂಡ ಪ್ರಕಟ: ಪೆರೆರಾ ಬದಲಿಗೆ ದಸುನ್ ನಾಯಕ BDA JK_Adv...
Home Front Page ಟೀಂ ಇಂಡಿಯಾ ಸರಣಿಗೆ ಶ್ರೀಲಂಕಾ ತಂಡ ಪ್ರಕಟ: ಪೆರೆರಾ ಬದಲಿಗೆ ದಸುನ್ ನಾಯಕ

ಟೀಂ ಇಂಡಿಯಾ ಸರಣಿಗೆ ಶ್ರೀಲಂಕಾ ತಂಡ ಪ್ರಕಟ: ಪೆರೆರಾ ಬದಲಿಗೆ ದಸುನ್ ನಾಯಕ

ಬೆಂಗಳೂರು, ಜುಲೈ 17, 2021 (www.justkannada.in): ಭಾರತ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಸರಣಿಗೆ  ಶ್ರೀಲಂಕಾ ತಂಡವನ್ನು ಇಂದು ಆಯ್ಕೆ ಮಾಡಲಾಗಿದೆ.

ದಸುನ್ ಶನಕಾ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕನಾಗಿದ್ದು ಕಳೆದ ನಾಲ್ಕು ವರ್ಷಗಳಲ್ಲಿ ಲಂಕಾ ತಂಡವನ್ನು ಮುನ್ನಡೆಸುತ್ತಿರುವ 10ನೇ ನಾಯಕನಾಗಿದ್ದಾರೆ.  ನಾಯಕನ ಸ್ಥಾನದಿಂದ ಕೆಳಗಿಳಿದ ಕುಸಲ್ ಪೆರೆರಾ ಮೊಣಕಾಲು ನೋವಿನ ಕಾರಣದಿಂದಾಗಿ ಈ ಸರಣಿಯಿಂದ ಹೊರಗುಳಿದಿದ್ದಾರೆ.

ಉಪನಾಯಕ ಧನಂಜಯ ಡಿಸಿಲ್ವ, ಅಕಿಲ ಧನಂಜಯ, ಇಸುರು ಉದಾನ, ಕಸುನ್ ರಜಿತಾ, ದುಷ್ಮಂತ ಚಮೀರಾ ಅವರಂತಾ ಅನುಭವಿ ಆಟಗಾರರ ಜೊತೆಗೆ ಯುವ ಬ್ಯಾಟಿಂಗ್ ಪ್ರತಿಭೆಗಳಾದ ಪತುಮ್ ಸಿಸ್ಸಾಂಕ, ಆವಿಷ್ಕಾ ಫೆರ್ನಾಂಡೋ ಮತ್ತು ಚರಿತ್ ಅಸಲಂಕಾ ಕೂಡ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಶ್ರೀಲಂಕಾ ತಂಡ ಇಂತಿದೆ…

ದಸುನ್ ಶನಕಾ (ನಾಯಕ), ಧನಂಜಯ ಡಿ ಸಿಲ್ವಾ (ಉಪನಾಯಕ), ಅವಿಷ್ಕಾ ಫರ್ನಾಂಡೊ, ಭಾನುಕಾ ರಾಜಪಕ್ಸೆ, ಪಾತುಮ್ ನಿಸ್ಸಂಕ, ಚರಿತ್ ಅಸಲಂಕಾ, ವನಿಂದು ಹಸರಂಗ, ಆಶೆನ್ ಬಂಡರಾ, ಮಿನೋಡ್ ಭನುಕಾ, ಲಹಿರು ಉದಾರ, ರಮೇಶ್ ಮೆಂಡಿಸ್, ಚಮಿಕಾ ಕರುಣರತ್ನೆ, ದುಷ್ಮಂತಾ ಚಮೀರಾ, ಲಕ್ಷನ್ ಸಂದಕನ್, ಅಕಿಲಾ ಧನಂಜಯ, ಶಿರನ್ ಫರ್ನಾಂಡೊ, ಧನಂಜಯ ಲಕ್ಷನ್, ಇಶಾನ್ ಜಯರತ್ನ, ಪ್ರವೀಣ್ ಜಯವಿಕ್ರೆಮಾ, ಆಸಿತಾ ಫರ್ನಾಂಡೊ, ಕಸುನ್ ರಾಜಿತಾ, ಲಹಿರು ಕುಮಾರ, ಇಸುರು ಉದಾನ