ವಿಧಾನ ಪರಿಷತ್ ನಲ್ಲಿ ಗದ್ದಲ, ಗಲಾಟೆ ಹಿನ್ನೆಲೆ: ಕಲಾಪ ನಾಳೆಗೆ ಮುಂದೂಡಿಕೆ…

ಬೆಂಗಳೂರು,ಜು,15,2019(www.justkannada.in): ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ದ ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯರ ನಡುವೆ ಗದ್ದಲ ಗಲಾಟೆ ಹೆಚ್ಚಾದ ಹಿನ್ನೆಲೆ ಪರಿಷತ್ ಕಲಾಪವನ್ನ ನಾಳೆಗೆ ಮುಂದೂಡಿಕೆ ಮಾಡಲಾಗಿದೆ.

ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲ. ಸಚಿವರು ರಾಜೀನಾಮೆ  ನೀಡಿದ್ದಾರೆ  ಹೀಗಾಗಿ ಅಧಿವೇಶನ ನಡೆಸಲು ಸಾಧ್ಯವಿಲ್ಲ ಎಂದು ಬಿಜೆಪಿ ಸದಸ್ಯರು ಪ್ರಶ್ನೋತ್ತರ ಕಲಾಪಕ್ಕೆ ಅಡ್ಡಿಪಡಿಸಿದರು. ಈ ವೇಳೆ  ಪರಿಷತ್ ಕಲಾಪದಲ್ಲಿ ಜೆಡಿಎಸ್- ಬಿಜೆಪಿ ಸದಸ್ಯರಿಂದ ಗದ್ದಲ ಕೋಲಾಹಲ  ಉಂಟಾಗಿತ್ತು.

ಈ ಹಿನ್ನೆಲೆ ಬಿಜೆಪಿ ಸಭಾಪತಿ ಸ್ಥಾನದಲ್ಲಿದ್ದ ಧರ್ಮೇಗೌಡರು ಕಲಾಪವನ್ನ ಅರ್ಧಗಂಟೆ ಮುಂದೂಡಿಕೆ ಮಾಡಿದ್ದರು. ಮತ್ತೆ ಪರಿಷತ್ ಕಲಾಪ ಆರಂಭವಾದ ವೇಳೆ ಬಿಜೆಪಿ ಸದಸ್ಯರು ಗದ್ದಲವನ್ನ ಮುಂದುವರೆಸಿದರು. ಈ ಕಲಾಪದಲ್ಲಿ ಗದ್ದಲ ಹೆಚ್ಚಾದ ಹಿನ್ನೆಲೆ ಕಲಾಪವನ್ನ ಸಭಾಪತಿ ನಾಳೆಗೆ ಮುಂದೂಡಿದರು.

ಇನ್ನು ಮಧ್ಯಾಹ್ನ 1.45 ಗಂಟೆಯಾದರೂ ವಿಧಾನಸಭೆ ಕಲಾಪ ಆರಂಭವಾಗಿಲ್ಲ. ವಿಧಾನಸೌಧದಲ್ಲಿ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದಲ್ಲಿ ಕಲಾಪ ಸಲಹಾ ಸಮಿತಿ ಸಭೆ ನಡೆಯುತ್ತಿದ್ದು ಸಭೆಯಲ್ಲಿ  ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸಿಎಲ್ ಪಿ ನಾಯಕ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ ಡಿಸಿಎಂ ಪರಮೇಶ್ವರ್ ಪಾಲ್ಗೊಂಡಿದ್ದಾರೆ.

Key words: Karnataka Council- Postponement – tomorrow.