Sunday, September 13, 2026

BDA Apartments

ಕಾಶ್ಮೀರದ ಪುಲ್ವಾಮಾ ‘ರಕ್ಷಕ್ ಕಾರ್ಯಾಚರಣೆ’ಯಲ್ಲಿ ಕರ್ನಾಟಕದ ಯೋಧ ಹುತಾತ್ಮ...
Home Front Page ಕಾಶ್ಮೀರದ ಪುಲ್ವಾಮಾ ‘ರಕ್ಷಕ್ ಕಾರ್ಯಾಚರಣೆ’ಯಲ್ಲಿ ಕರ್ನಾಟಕದ ಯೋಧ ಹುತಾತ್ಮ

ಕಾಶ್ಮೀರದ ಪುಲ್ವಾಮಾ ‘ರಕ್ಷಕ್ ಕಾರ್ಯಾಚರಣೆ’ಯಲ್ಲಿ ಕರ್ನಾಟಕದ ಯೋಧ ಹುತಾತ್ಮ

ಬೆಂಗಳೂರು, ಜುಲೈ 04, 2021 (www.justkannada.in): ವಿಜಯಪುರ ಮೂಲದ ಯೋಧ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಹುತಾತ್ಮರಾಗಿದ್ದಾರೆ.

ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧ ಕಾಶೀರಾಯ ಬೊಮ್ಮನಹಳ್ಳಿ, ಕಳೆದ ಜುಲೈ 2 ರಂದು ಪುಲ್ವಾಮಾದಲ್ಲಿ ನಡೆದ ರಕ್ಷಕ್ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದಾರೆ. ಪಾರ್ಥಿವ ಶರೀರ ಇಂದು ಹುಟ್ಟೂರು ತಲುಪಲಿದೆ.

ಇಂದು ವಿಜಯಪುರದಿಂದ ಯೋಧನ ಸ್ವಗ್ರಾಮದವರೆಗೆ ಮೆರವಣಿಗೆ ನಡೆಸಿ, ನಂತರ ಉಕ್ಕಲಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಯಲಿದೆ.