Sunday, September 27, 2026

BDA Apartments

ರಾಜ್ಯ ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಆಡಳಿತಾಧಿಕಾರಿ ನೇಮಿಸುವಂತೆ ...
Home Front Page ರಾಜ್ಯ ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಆಡಳಿತಾಧಿಕಾರಿ ನೇಮಿಸುವಂತೆ ಸಿ.ಜಿ ಗಂಗಾಧರ್ ಗೌಡ ಆಗ್ರಹ

ರಾಜ್ಯ ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಆಡಳಿತಾಧಿಕಾರಿ ನೇಮಿಸುವಂತೆ ಸಿ.ಜಿ ಗಂಗಾಧರ್ ಗೌಡ ಆಗ್ರಹ

ಬೆಂಗಳೂರು,ಜುಲೈ,3,2021(www.justkannada.in): ರಾಜ್ಯ ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಆಡಳಿತಾಧಿಕಾರಿ  ನೇಮಿಸುವಂತೆ ನಾಡಪ್ರಭು ಕೆಂಪೇಗೌಡರ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಸಿ ಜಿ ಗಂಗಾಧರ್ ಗೌಡ ಆಗ್ರಹಿಸಿದ್ದಾರೆ.jk

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ  ಸಿ.ಜಿ ಗಂಗಾಧರ್ ಗೌಡ ಅವರು, ಒಕ್ಕಲಿಗರ ಪ್ರಾಧಿಕಾರ ಆದೇಶದೊಂದಿಗೆ ರೂ 500ಕೋಟಿಗಳನ್ನು ಘೋಷಣೆ ಮಾಡಲಾಗಿತ್ತು. ಆದರೆ ಈ ಮೊತ್ತವು ರಾಜ್ಯಾದ್ಯಂತ ಜಿಲ್ಲಾವಾರು ಮತ್ತು ಇಲಾಖೆಗಳಿಗೆ ಹಂಚಿಕೆಯಾಗಿಲ್ಲ ಇದು ಪ್ರಾಧಿಕಾರದ ಅಧಿಕಾರಿಗಳ ನೇಮಕ ವಾಗಿರದ ಹಿನ್ನೆಲೆ ವಿಳಂಬವಾಗುತ್ತಿದೆ .ಆದ್ದರಿಂದ ಘೋಷಣೆಯಾಗಿರುವ ಮೊತ್ತ  ಸಮುದಾಯದ ಅಭಿವೃದ್ಧಿಗೆ ವಿನಿಯೋಗವಾಗಬೇಕು ಆದ್ದರಿಂದ ಈ ಕೂಡಲೇ ಆಡಳಿತಾಧಿಕಾರಿ ಮತ್ತು ಪದಾಧಿಕಾರಿಗಳ ನೇಮಕ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Key words: CG Gangadhar Gowda-demands – appointment – administrative officer – state’s vokkaliga development authority