ಹೃದಯಾಘಾತದಿಂದ ಪೊಲೀಸ್ ಕಾನ್ಸ್ ಟೇಬಲ್ ನಿಧನ.

ಮೈಸೂರು,ಜುಲೈ,3,2021(www.justkannada.in): ಹೃದಯಾಘಾತದಿಂದ ಪೊಲೀಸ್  ಕಾನ್ಸ್ ಟೇಬಲ್ ನಿಧನರಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.jk

ಶ್ರೀನಿವಾಸ್ ಹೃದಯಾಘಾತದಿಂದ ನಿಧನರಾದ ಪೊಲೀಸ್  ಕಾನ್ಸ್ ಟೇಬಲ್. ಹುಣಸೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀನಿವಾಸ್, ನಿನ್ನೆ ಹಗಲು ಕರ್ತವ್ಯ ಮುಗಿಸಿ ಪೊಲೀಸ್ ವಸತಿ ಗೃಹಕ್ಕೆ ಬಂದಿದ್ದರು. ಇಲ್ಲೇ ಶ್ರೀನಿವಾಸ್  ಕುಸಿದು ಬಿದಿದ್ದು, ಕೂಡಲೇ ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ರವಾನೆ ಮಾಡಲಾಯಿತು.

ಆದರೆ ಪೊಲೀಸ್ ಕಾನ್ಸ್ ಟೇಬಲ್ ಶ್ರೀನಿವಾಸ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ 3 ಗಂಟೆಯಲ್ಲಿ ನಿಧನರಾದರು. 1995ನೇ ಬ್ಯಾಚ್ ಸಿಬ್ಬಂದಿಯಾಗಿದ್ದ ಶ್ರೀನಿವಾಸ್ ಹುಣಸೂರು ಪಟ್ಟಣ ಠಾಣೆಯಲ್ಲಿ 2 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತ ಶ್ರೀನಿವಾಸ್ ಮಂಡ್ಯ ಜಿಲ್ಲೆಯ ಪಾಂಡವಪುರದ ನಿವಾಸಿಯಾಗಿದ್ದಾರೆ.

Key words: mysore- police- died-heart attack.