Sunday, August 9, 2026

BDA Apartments

Home Front Page ಪಕ್ಷದಲ್ಲಿ ಹಿರಿಯರನ್ನ ಸೈಡ್ ಲೈನ್ ಮಾಡಲಾಗುತ್ತಿದೆ- ಸಚಿವ ಶ್ರೀರಾಮುಲು ಅಸಮಾಧಾನ.

ಪಕ್ಷದಲ್ಲಿ ಹಿರಿಯರನ್ನ ಸೈಡ್ ಲೈನ್ ಮಾಡಲಾಗುತ್ತಿದೆ- ಸಚಿವ ಶ್ರೀರಾಮುಲು ಅಸಮಾಧಾನ.

ಬೆಂಗಳೂರು,ಜುಲೈ,2,2021(www.justkannada.in):  ನನ್ನ ಪಕ್ಷದಲ್ಲಿ ಹಿರಿಯರಿಗೆ ಅವಮಾನವಾಗುತ್ತಿದೆ. ಪಕ್ಷದಲ್ಲಿ ಹಿರಿಯರನ್ನ ಸೈಡ್ ಲೈನ್ ಮಾಡಲಾಗುತ್ತಿದೆ ಎಂದು ಸಚಿವ ಶ್ರೀರಾಮುಲು ಅಸಮಾಧಾನ ವ್ಯಕ್ತಪಡಿಸಿದ್ದಾರೆ.jk

ಸಚಿವ ಶ್ರೀರಾಮುಲು ಆಪ್ತನ ವಿರುದ್ಧ ವಂಚನೆ ಆರೋಪದ ಮೇಲೆ ದೂರು ನೀಡಲಾಗಿದೆ. ಸಿಎಂ ಪುತ್ರ ಬಿವೈ ವಿಜಯೇಂದ್ರ ದೂರು ನೀಡಿದ್ದು  ಸಚಿವ ಶ್ರೀರಾಮುಲು  ಪಿಎ ರಾಜಣ್ಣರನ್ನ ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ಶ್ರೀರಾಮುಲು, ರಾಜಣ್ಣ ನನ್ನ ಪಿಎ ಅಲ್ಲ. ನನಗೆ ಪರಿಚಯವಿರುವ ವ್ಯಕ್ತಿ ಮಾತ್ರ.  ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಹೀಗಾಗಿ ಮಾತನಾಡಲ್ಲ. ಸಿಎಂ ಬಿಎಸ್ ವೈ ವಿಜಯೇಂದ್ರ ಬಳಿ ಈ ಕುರಿತು ಚರ್ಚಿಸುತ್ತೀನಿ. ನನ್ನನ್ನು ಸಂಪರ್ಕಿಸದೆ ದೂರು ನೀಡಿದ್ದು ಸರಿ ಎನಿಸುತ್ತಿಲ್ಲ ಎಂದು ಬಿವೈ ವಿಜಯೇಂದ್ರ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಬಿಜೆಪಿಯಲ್ಲಿ ಹಿರಿಯರಿಗೆ ಅಪಮಾನವಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಶ್ರೀರಾಮುಲು, ನಿಮ್ಮ ಪ್ರಶ್ನೆ ಸಮಂಜಸವಾಗಿದೆ. ನೀವು ಹೇಳಿರುವುದು ಸರಿಯಾಗಿಯೇ ಇದೆ. ಇದನ್ನು ನಾನು ಕೂಡ ಒಪ್ಪುತ್ತೇನೆ ಎಂದು  ತಿಳಿಸಿದರು.

Key words: Senior –sideline- party – Minister -Sriramulu