Saturday, August 15, 2026

BDA Apartments

Home Front Page ಕೃಷಿ ಕಾಯಿದೆ ವಿರೋಧಿಸಿ ಬೆಂಗಳೂರಿನಲ್ಲಿಂದು ರೈತರಿಂದ ‘ರಾಜಭವನ ಚಲೋ’

ಕೃಷಿ ಕಾಯಿದೆ ವಿರೋಧಿಸಿ ಬೆಂಗಳೂರಿನಲ್ಲಿಂದು ರೈತರಿಂದ ‘ರಾಜಭವನ ಚಲೋ’

ಬೆಂಗಳೂರು, ಜೂನ್ 26, 2021 (www.justkannada.in): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರು ಬೆಂಗಳೂರಿನಲ್ಲಿ ಇಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ರೈತ ಮುಖಂಡರು ಇಂದು ರಾಜಭವನದ ಎದುರು ಪ್ರತಿಭಟನೆ ನಡೆಸಲಿದ್ದಾರೆ. ಇನ್ನು ದೆಹಲಿ ರೈತರು ಕಳೆದ 214 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ದೆಹಲಿ ರೈತರ ಹೋರಾಟ ಬೆಂಬಲಿಸಲು ಮುಂದಾಗಿರುವ ಕರ್ನಾಟಕದ ರೈತರು ಇಂದು ರಾಜಭವನ ಚಲೋ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ.

ರೈತರ ಬೃಹತ್ ಪ್ರತಿಭಟನೆ ಬೆಳಗ್ಗೆ 11ಕ್ಕೆ ಶುರುವಾಗಲಿದ್ದು, ನಂತರ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.train-rocco-protest-farmers-break-belagavi-railway-station-police