Monday, September 14, 2026

BDA Apartments

ಕೊಡಗಿನ ಶನಿವಾರಸಂತೆಯಲ್ಲಿ ಶಾಲೆಗೆ ಬಂದ ಕಾಡಾನೆಗಳು! BDA JK_Adv BDA Adv
Home Front Page ಕೊಡಗಿನ ಶನಿವಾರಸಂತೆಯಲ್ಲಿ ಶಾಲೆಗೆ ಬಂದ ಕಾಡಾನೆಗಳು!

ಕೊಡಗಿನ ಶನಿವಾರಸಂತೆಯಲ್ಲಿ ಶಾಲೆಗೆ ಬಂದ ಕಾಡಾನೆಗಳು!

ಶನಿವಾರಸಂತೆ, ಜೂನ್ 26, 2021 (www.justkannada.in): ಶನಿವಾರಸಂತೆ ಪಟ್ಟಣಕ್ಕೆ ದಾಂಗುಡಿ ಇಟ್ಟಿದ್ದ ಎರಡು ಕಾಡಾನೆಗಳು ಶಾಲೆಯೊಂದರ ಕಾಪೌಂಡ್ ಅನ್ನು ನೆಲಕ್ಕುರುಳಿಸಿವೆ.

ಶನಿವಾರಸಂತೆಯ ಸೆಕ್ರೇಡ್ ಆರ್ಟ್ ವಿದ್ಯಾಸಂಸ್ಥೆಯ ಬಳಿ ಮುಂಜಾನೆ ಬಂದ ಎರಡು ಕಾಡಾನೆಗಳು ಸಂಸ್ಥೆಯ ಗೇಟ್‌ ಹಾಗೂ ತಡೆಗೋಡೆಯನ್ನು ಕೆಡವಿ ಹಾಕಿವೆ.

ತಡೆಗೋಡೆ ಹಾಗೂ ಗೆಟ್‌ಅನ್ನು ಬೀಳಿಸಿ ನಂತರ ಚಿಕ್ಕಕೊಳತ್ತೂರು ಗ್ರಾಮದ ರಸ್ತೆಯಲ್ಲಿ ಸಾಗಿದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಶಿಕ್ಷಣ ಸಂಸ್ಥೆಯಿಂದ ಶನಿವಾರಸಂತೆ ವಲಯ ಅರಣ್ಯ ಅಧಿಕಾರಿಗೆ ದೂರು ನೀಡಲಾಗಿದೆ.