Sunday, September 6, 2026

BDA Apartments

Home Front Page ಇಂದು ಫ್ರೆಂಚ್ ಓಪೆನ್ ಫೈನಲ್ಸ್ : ಪ್ರಶಸ್ತಿಗೆ ಮುತ್ತಿಡಲು ಬಾರ್ಬೊರಾ ಕ್ರೆಜಿಕೋವಾ-ಪಾವ್ಲುಚೆಂಕೋವಾ ಫೈಟ್

ಇಂದು ಫ್ರೆಂಚ್ ಓಪೆನ್ ಫೈನಲ್ಸ್ : ಪ್ರಶಸ್ತಿಗೆ ಮುತ್ತಿಡಲು ಬಾರ್ಬೊರಾ ಕ್ರೆಜಿಕೋವಾ-ಪಾವ್ಲುಚೆಂಕೋವಾ ಫೈಟ್

ಬೆಂಗಳೂರು, ಜೂನ್ 12, 2021(www.justkannada.in): ಫ್ರೆಂಚ್ ಓಪೆನ್ ಟೆನಿಸ್ ಪಂದ್ಯಾವಳಿಯ ಮಹಿಳೆಯರ ವಿಭಾಗದಲ್ಲಿ ಜೆಕ್‌ ಆಟಗಾರ್ತಿ ಬಾರ್ಬೊರಾ ಕ್ರೆಜಿಕೋವಾ ಅವರು ರಷ್ಯಾದ ಅನಾಸ್ತಾಸಿಯಾ ಪಾವ್ಲುಚೆಂಕೋವಾ ಎದುರಿಸಲಿದ್ದಾರೆ.

ಅಂದಹಾಗೆ ಬಾರ್ಬೊರಾ ಕ್ರೆಜಿಕೋವಾ ಪ್ರಪ್ರಥಮ ಬಾರಿಗೆ ಗ್ರಾನ್‌ಸ್ಲಾಮ್‌ ಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಹೀಗಾಗಿ ಫೈನಲ್ಸ್ ತೀವ್ರ ಕುತೂಹಲ ಮೂಡಿಸಿದ್ದು, ಗೆಲುವಿನ ಸಿಹಿ ಯಾರಿಗೆ ಎಂಬುದು ಟೆನಿಸ್‌ ಅಭಿಮಾನಿಗಳ ಕುತೂಹಲವಾಗಿದೆ.

ಇಬ್ಬರಿಗೂ ಇದು ಮೊದಲ ಗ್ರಾನ್‌ಸ್ಲಾಮ್‌ ಫೈನಲ್‌ ಆಗಿರುವುದರಿಂದ ಫ್ರೆಂಚ್‌ ಓಪನ್‌ ನೂತನ ಚಾಂಪಿ ಯನ್‌ ಆಟಗಾರ್ತಿಯನ್ನು ಸ್ವಾಗತಿಸಲು ಸಜ್ಜಾಗಿದೆ. 2015ರ ಆಸ್ಟ್ರೇಲಿಯನ್‌ ಓಪನ್‌ ಬಳಿಕ ರಶ್ಯನ್‌ ಆಟಗಾರ್ತಿಯೊಬ್ಬರು ಕಾಣುತ್ತಿರುವ ಮೊದಲ ಗ್ರಾನ್‌ಸ್ಲಾಮ್‌ ಫೈನಲ್‌ ಇದಾಗಿದೆ.