ಬೆಂಗಳೂರು, ಜೂನ್ 12, 2021 (www.justkannada.in): ನೊವಾಕ್ ಜೊಕೋವಿಕ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ತಲುಪಿದ್ದಾರೆ.
ಹದಿಮೂರು ಬಾರಿಯ ಚಾಂಪಿಯನ್ ರಫೆಲ್ ನಡಾಲ್ ವಿರುದ್ಧ ಐತಿಹಾಸಿಕ ಜಯ ಸಾಧಿಸುವ ಮೂಲಕ ನೊವಾಕ್ ಜೊಕೋವಿಕ್ ಪ್ರಶಸ್ತಿ ಸುತ್ತಿಗೆ ದಾಪುಗಾಲಿಟ್ಟಿದ್ದಾರೆ.
ಉಭಯ ಆಟಗಾರರ ವೃತ್ತಿ ಜೀವನದ ಪರಸ್ಪರ 58ನೇ ಸೆಣಸಾಟದಲ್ಲಿ ಜೋಕೋವಿಕ್ 3-6, 6-3, 7-6 (7/4), 6-2 ಸೆಟ್‌ಗಳ ಅಮೋಘ ಜಯ ಸಾಧಿಸಿದರು.
ನಡಾಲ್‌ಗೆ ಇದು 16 ವರ್ಷಗಳ 108 ಪಂದ್ಯಗಳಲ್ಲಿ ಮೂರನೇ ಸೋಲು ಇದಾಗಿದೆ. ಇತಿಹಾಸದಲ್ಲಿ ಎಲ್ಲ ನಾಲ್ಕು ಗ್ರ್ಯಾಂಡ್ ಸ್ಲಾಮ್‌ಗಳನ್ನು ಎರಡು ಬಾರಿ ಗೆದ್ದ ಮೊದಲ ವ್ಯಕ್ತಿ ಎಂಬ ದಾಖಲೆ ಸೇರುವ ನಡಾಲ್ ಕನಸನ್ನು ನುಚ್ಚು ನೂರು ನೂರಾಗಿದೆ.
 
            