Friday, October 16, 2026

Dasara Wishes

Happy Dasara
Home Front Page ದಲಿತರ ಪಾಲಿನ ಹಣ ಯಾರ ಮನೆಗೆ ಹೋಯ್ತು? ಗ್ಯಾರಂಟಿಗಳನ್ನ ಟೀಕಿಸಿದ ಛಲವಾದಿ ನಾರಾಯಣಸ್ವಾಮಿ

ದಲಿತರ ಪಾಲಿನ ಹಣ ಯಾರ ಮನೆಗೆ ಹೋಯ್ತು? ಗ್ಯಾರಂಟಿಗಳನ್ನ ಟೀಕಿಸಿದ ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು,ಫೆಬ್ರವರಿ,25,2026 (www.justkannada.in):  ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಬಗ್ಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ರಾಜ್ಯದಲ್ಲಿ ಇಂದಿರ ಕಿಟ್ ಕೊಡುತ್ತೇವೆ ಅಂದರು ಇಂದಿರಾ ಕಿಟ್ ಯಾವ ಕಿಟ್ ಸೇರಿತು? ನಾವು ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುತ್ತೇವೆ ಅಂದರು ಅದರೆ ಕೇಂದ್ರ ಸರ್ಕಾರ ಪೂರೈಸುವ 5 ಕೆಜಿ ಅಕ್ಕಿ ಮಾತ್ರ ವಿತರಣೆ ಮಾಡುತ್ತಿದ್ದಾರೆ.  ಪ್ರತಿಮನೆಗೆ 200 ಯೂನಿಟ್ ವಿದ್ಯುತ್  ಫ್ರಿ ಎಂದಿದ್ದರು.  500 ರೂ. ಬರುತ್ತಿದ್ದ ವಿದ್ಯುತ್  ಬಿಲ್ 2 ಸಾವಿರ ರೂ.  ಬರುತ್ತಿದೆ . ಇನ್ನು  ಗೃಹಲಕ್ಷ್ಮೀ ಹಣ 2 ಸಾವಿರಕ್ಕಾಗಿ ಹೆಣ್ಣುಮಕ್ಕಳು ಕಾದು ಕಾದು ಸುಸ್ತಾಗುತ್ತಿದ್ದಾರೆ.  ನಿಜ ಹೇಳಿ ಯಾವ ಲಕ್ಷ್ಮಿಗೆ ಗೃಹ ಲಕ್ಷ್ಮೀ ಕೊಡುತ್ತಿದ್ದೀರಿ  ಎಂದರು ಕುಟುಕಿದರು.

ಗ್ಯಾರಂಟಿಗಳಿಗೆ ಬಜೆಟ್ ನಲ್ಲಿ  52 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ  ಅಂದರು. ಆದರೆ ಆ 52 ಸಾವಿರ ಕೋಟಿ ಹಣದಲ್ಲಿ ದಲಿತರಿಗೆ ಪಾಲಿಲ್ಲವೇ?   ಎಸ್ ಸಿಪಿ,  ಟಿಎಸ್ ಪಿ ಹೆಸರಲ್ಲಿ ಮೂರು ವರ್ಷದಲ್ಲಿ   39 ಸಾವಿರ ಕೊಟಿ ಎತ್ತುತ್ತೀರಿ ಹಾಗಾದರೇ ದಲಿತರ ಪಾಲಿನ ಹಣ ಯಾರ ಮನೆಗೆ ಹೋಯಿತು  ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.

Key words: Chalavadi Narayanaswamy, criticized , guarantees