Tuesday, September 29, 2026

BDA Apartments

ಫಿಫಾ ವಿಶ್ವಕಪ್, ಏಷ್ಯನ್ ಕಪ್ ಕ್ವಾಲಿಫೈಯರ್: ಭಾರತ-ಕತಾರ್ ಫೈಟ್ ಇಂದು BDA JK_Adv BDA Adv
Home Front Page ಫಿಫಾ ವಿಶ್ವಕಪ್, ಏಷ್ಯನ್ ಕಪ್ ಕ್ವಾಲಿಫೈಯರ್: ಭಾರತ-ಕತಾರ್ ಫೈಟ್ ಇಂದು

ಫಿಫಾ ವಿಶ್ವಕಪ್, ಏಷ್ಯನ್ ಕಪ್ ಕ್ವಾಲಿಫೈಯರ್: ಭಾರತ-ಕತಾರ್ ಫೈಟ್ ಇಂದು

ಬೆಂಗಳೂರು, ಜೂನ್ 03, 2021 (www.justkannada.in): ಭಾರತ ಫುಟ್ಬಾಲ್ ತಂಡ ಇಂದು ಬಲಿಷ್ಠ ಕತಾರ್‌ ತಂಡವನ್ನು ಅವರದೇ ಅಂಗಳದಲ್ಲಿ ಎದುರಿಸಲಿದೆ.

ಫಿಫಾ ವಿಶ್ವಕಪ್‌ ಹಾಗೂ ಏಶ್ಯನ್‌ ಕಪ್‌ ಜಂಟಿ ಕ್ವಾಲಿಫೈಯರ್‌ ಕೂಟದಲ್ಲಿ ಆಡಲಿರುವ ಭಾರತ ಬಲಿಷ್ಠ ಕತಾರ್‌ ತಂಡದ ವಿರುದ್ಧ ಸೆಣೆಸಾಡಲಿದೆ.

ಭಾರತಕ್ಕೆ ಇದು ಕತಾರ್‌ ಎದುರಿನ ಸೆಕೆಂಡ್‌ ಲೆಗ್‌ ಪಂದ್ಯವಾಗಿದೆ. 2019ರ ಮೊದಲ ಮುಖಾಮುಖೀಯ ವೇಳೆ ಗೋಲ್‌ ಲೆಸ್‌ ಡ್ರಾ ಸಾಧಿಸಿದ್ದು ಭಾರತ ಅಮೋಘ ಸಾಧನೆ ಎನಿಸಿತ್ತು.

ಕಳೆದ ತಿಂಗಳು ಕೋಲ್ಕತಾದಲ್ಲಿ ನಡೆಯಬೇಕಿದ್ದ ರಾಷ್ಟ್ರೀಯ ಶಿಬಿರ ರದ್ದುಗೊಂಡದ್ದು ಭಾರತೀಯರ ಅಭ್ಯಾಸಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.

ನಾಯಕ ಸುನೀಲ್‌ ಚೆಟ್ರಿ ಕೋವಿಡ್‌ ಕಾರಣದಿಂದ ಎರಡೂ ಅಭ್ಯಾಸ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ.