Sunday, September 20, 2026

BDA Apartments

ದಳಪತಿ ವಿಜಯ್ 66ನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ನಿರ್ದೇಶಕ ಯಾರು ಗೊತ್ತಾ?...
Home Cinema ದಳಪತಿ ವಿಜಯ್ 66ನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ನಿರ್ದೇಶಕ ಯಾರು ಗೊತ್ತಾ?!

ದಳಪತಿ ವಿಜಯ್ 66ನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ನಿರ್ದೇಶಕ ಯಾರು ಗೊತ್ತಾ?!

ಬೆಂಗಳೂರು, ಮೇ 31, 2021 (www.justkannada.in): ನಿರ್ದೇಶಕ ವಂಶಿ ಪೈಡಿಪಲ್ಲಿ ದಳಪತಿ ವಿಜಯ್​ 66ನೇ ಚಿತ್ರಕ್ಕೆ ಆಯಕ್ಷನ್​ ಕಟ್​ ಹೇಳಲಿದ್ದಾರೆ.

ತೆಲುಗಿನಲ್ಲಿ ‘ಮಹರ್ಷಿ’ಯಂಥ ಹಿಟ್​ ಸಿನಿಮಾಗಳನ್ನು ನಿರ್ದೇಶನ ಮಾಡಿದ ವಂಶಿ ಪೈಡಿಪಲ್ಲಿ ವಿಜಯ್ ಚಿತ್ರಕ್ಕೆ ನಿರ್ದೇಶನ ಮಾಡುವ ವಿಷಯ ಅಧಿಕೃತವಾಗಿದೆ.

ವಿಜಯ್ ನಟನೆಯ ಇತ್ತೀಚಿನ ಸಿನಿಮಾಗಳು ಡಬ್​ ಆಗಿ ತೆಲುಗಿನಲ್ಲಿ ರಿಲೀಸ್​ ಆಗುತ್ತಿತ್ತು. ಆದರೆ, ಈ ಬಾರಿ ತಮಿಳು ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಸಿನಿಮಾ ಸಿದ್ಧಪಡಿಸಲು ನಿರ್ಮಾಪಕ ದಿಲ್​ ರಾಜು ಚಿಂತನೆ ನಡೆಸಿದ್ದಾರೆ.

ಜೂನ್​ 22 ವಿಜಯ್​ ಜನ್ಮದಿನ. ಈ ವಿಶೇಷ ದಿನದಂದು ಚಿತ್ರತಂಡ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲು ಚಿಂತಿಸಿದೆ ಎನ್ನಲಾಗಿದೆ.