ಚಿತ್ರರಂಗದ ಕಲಾವಿದರಿಗೆ ಇಂದಿನಿಂದ ಎರಡು ದಿನಗಳ ಕಾಲ ‘ವ್ಯಾಕ್ಸಿನ್ ಡ್ರೈವ್ ‘

ಬೆಂಗಳೂರು,ಮೇ,31,2021(www.justkannada.in):  ಚಿತ್ರರಂಗದ ಕಲಾವಿದರಿಗಾಗಿ ಇಂದಿನಿಂದ ಎರಡು ದಿನಗಳ ಕಾಲ ‘ವ್ಯಾಕ್ಸಿನ್ ಡ್ರೈವ್ ‘ ಆಯೋಜನೆ ಮಾಡಲಾಗಿದ್ದು, ಕಲಾವಿದರಿಗೆ ಉಚಿತವಾಗಿ “ಕೋವಿಶಿಲ್ಡ್” ಲಸಿಕೆ ನೀಡಲಾಗುತ್ತಿದೆ.jk

ದಿನಾಂಕ 31.5.2021 ಮತ್ತು 1.6.2021 ಸೋಮವಾರ ಮತ್ತು ಮಂಗಳವಾರ ಈ ಎರಡು ದಿನ ಬೆಳಗ್ಗೆ 10.00 ಘಂಟೆ ಯಿಂದ ಸಂಜೆ 5.00 ಘಂಟೆಯವರೆಗೂ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ “ಕೋವಿಶಿಲ್ಡ್” ಲಸಿಕೆ ಎನ್ನು ಉಚಿತವಾಗಿ ನೀಡಲಾಗುತ್ತಿದೆ.

ಇಂದು ಬೆಳಗ್ಗೆ 11.30ಕ್ಕೆ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ‘ವ್ಯಾಕ್ಸಿನ್ ಡ್ರೈವ್  ಗೆ ಚಾಲನೆ ನೀಡಲಿದ್ದು, ಸಂಸದೆ ಸುಮಲತಾ ಅಂಬರೀಶ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ  ಸುನೀಲ್ ಪುರಾಣಿಕ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ಆರೋಗ್ಯ ಇಲಾಖೆಯ ಪ್ರಮುಖ ಅಧಿಕಾರಿ ಹಾಗೂ  ಬಿಬಿಎಂಪಿ ಕಮಿಷನರ್ ಅವರು ಉಪಸ್ಥಿತರಿರುತ್ತಾರೆ ಎಂದು ಚಿತ್ರರಂಗ ವ್ಯಾಕ್ಸಿನೇಷನ್ ಡ್ರೈವ್ ನೋಡಲ್ ಆಫೀಸರ್ ರೂಪ ಅಯ್ಯರ್ ಶ್ರೀವತ್ಸ ತಿಳಿಸಿದ್ದಾರೆ.

ಹಾಗೆಯೇ ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲ ಕಲಾಬಂಧುಗಳು ಈ ಸದಾವಕಾಶದ ಉಪಯೋಗವನ್ನು ಪಡೆದು ಕೊಳ್ಳಬೇಕು. ಈ ಸಂದರ್ಭದಲ್ಲಿ ಹಾಜರಾಗುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಆಧಾರ್ ಪತ್ರವನ್ನು ತರಬೇಕು, ಮಾಸ್ಕ್ ಧರಿಸಬೇಕು ಮತ್ತು  ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳಬೇಕು ಎಂದು ರೂಪ ಅಯ್ಯರ್ ಶ್ರೀವತ್ಸ ಮನವಿ ಮಾಡಿದ್ದಾರೆ.

Key words: Vaccine drive -two days -today –cinema- artists-bangalore