Sunday, August 23, 2026

BDA Apartments

Home Front Page ಮೈಸೂರು ಸೇರಿ ಐದು ಜಿಲ್ಲೆಗಳ ಜಿಲ್ಲಾಡಳಿತ ಜತೆ ಸಿಎಂ ಬಿಎಸ್ ವೈ ವಿಡಿಯೋ ಕಾನ್ಫರೆನ್ಸ್…

ಮೈಸೂರು ಸೇರಿ ಐದು ಜಿಲ್ಲೆಗಳ ಜಿಲ್ಲಾಡಳಿತ ಜತೆ ಸಿಎಂ ಬಿಎಸ್ ವೈ ವಿಡಿಯೋ ಕಾನ್ಫರೆನ್ಸ್…

ಬೆಂಗಳೂರು,ಮೇ,29,2021(www.justkannada.in): ರಾಜ್ಯದ ಕೊರೋನಾ 2ನೇ ಅಲೆ ವ್ಯಾಪಕವಾಗಿ ಹರಡಿದ್ದು ಮಹಾಮಾರಿಯನ್ನ ತಡೆಗಟ್ಟಲು ರಾಜ್ಯದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಈ ಮಧ್ಯೆ ಮೈಸೂರು ಸೇರಿ ಐದು ಜಿಲ್ಲೆಗಳ ಜಿಲ್ಲಾಡಳಿತದ ಜತೆ ಸಿಎಂ ಬಿಎಸ್ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದಾರೆ.jk

ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಕಠಿಣ ಲಾಕ್ ಡೌನ್ ಜಾರಿ ಮಾಡಲಾಗಿದ್ದು, ಕೊರೊನಾ ನಿರ್ವಹಣೆ ಬಗ್ಗೆ ಚರ್ಚಿಸಲು ಕಲಬುರುಗಿ, ಹಾಸನ,ವಿಜಯಪುರ, ಬೆಳಗಾವಿ, ಮೈಸೂರು ಜಿಲ್ಲೆಗಳ ಜಿಲ್ಲಾಡಳಿತದ ಜತೆ ಸಿಎಂ ಬಿಎಸ್ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ವಿಡಿಯೋ ಸಂವಾದ ನಡೆಯುತ್ತಿದ್ದು, ಜಿಲ್ಲೆಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗಿಯಾಗಿದ್ದಾರೆ. ಹಾಗೆಯೇ ಡಿಸಿಎಂಗಳಾ ಅಶ್ವಥ್ ನಾರಾಯಣ್, ಗೋವಿಂದ ಕಾರಜೋಳ, ಕಂದಾಯ ಸಚಿವ ಆರ್.ಅಶೋಕ್ ಪಾಲ್ಗೊಂಡಿದ್ದಾರೆ.

Key words: CM BS yeddyurappa- Video Conference – Mysore-five District -administration