Sunday, August 23, 2026

BDA Apartments

Home Front Page ವಿಶ್ವ ಟೆಸ್ಟ್ ಚಾಂಪಿಯನ್’ಶಿಪ್: ಗೆದ್ದೇ ಗೆಲ್ಲುತ್ತೇವೆ, ಗೆದ್ದೇ ತೀರುತ್ತೇವೆ ಎಂದ ಪೂಜಾರ

ವಿಶ್ವ ಟೆಸ್ಟ್ ಚಾಂಪಿಯನ್’ಶಿಪ್: ಗೆದ್ದೇ ಗೆಲ್ಲುತ್ತೇವೆ, ಗೆದ್ದೇ ತೀರುತ್ತೇವೆ ಎಂದ ಪೂಜಾರ

ಬೆಂಗಳೂರು, ಮೇ 27, 2021 (www.justkannada.in): ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಕುರಿತು ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಮಾತನಾಡಿದ್ದಾರೆ.

ಸ್ಥಳ ಯಾವುದೇ ಇರಲಿ ಹಾಗೂ ಎದುರಾಳಿ ತಂಡ ಯಾವುದೇ ಆಗಿರಲಿ ಟೀಮ್ ಇಂಡಿಯಾ ಗೆಲ್ಲುವುದು ಖಚಿತ ಎಂದು ಪೂಜಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಲವಾರು ಟೆಸ್ಟ್ ಸರಣಿಗಳನ್ನು ಗೆದ್ದು ಕಷ್ಟಪಟ್ಟು ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯವನ್ನು ತಲುಪಿದ್ದೇವೆ, ಈ ಟ್ರೋಫಿಯನ್ನು ಗೆಲ್ಲುವುದು ನಮ್ಮ ತಂಡದ ಕನಸಾಗಿದೆ ಎಂದಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟ್ರೋಫಿ ಟೆಸ್ಟ್ ಕ್ರಿಕೆಟ್‌ನ ವಿಶ್ವಕಪ್ ಇದ್ದಂತೆ’ ಎದ್ದು ಚೇತೇಶ್ವರ್ ಪೂಜಾರ ಹೇಳಿದ್ದಾರೆ.