Tuesday, September 29, 2026

BDA Apartments

ಲೈಂಗಿಕ ಕಿರುಕುಳ ಆರೋಪ BDA JK_Adv BDA Adv
Home Crime ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ಸಿಜೆಐ ರಂಜನ್ ಗೋಗಯ್ ಅವರಿಗೆ ಕ್ಲೀನ್ ಚಿಟ್…

ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ಸಿಜೆಐ ರಂಜನ್ ಗೋಗಯ್ ಅವರಿಗೆ ಕ್ಲೀನ್ ಚಿಟ್…

ನವದೆಹಲಿ,ಮೇ,6,2019(www.justkannada.in): ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ಸುಪ್ರೀಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ಅವರಿಗೆ ಸುಪ್ರೀಂಕೋರ್ಟ್ ಸಮಿತಿ ಕ್ಲೀನ್ ಚಿಟ್ ನೀಡಿದೆ.

ಸಿಜೆಐ ರಂಜನ್ ಗೋಗಯ್ ಅವರ ವಿರುದ್ದ ಸುಪ್ರೀಂ ಕೋರ್ಟ್‌ನ ಮಾಜಿ ಮಹಿಳಾ ಸಿಬ್ಬಂದಿಯೊಬ್ಬರು ಮಾಡಿರುವ ಲೈಂಗಿಕ ಕಿರುಕುಳ ಆರೋಪ ಪ್ರಕರಣವನ್ನ ಸುಪ್ರೀಂ ಕೋರ್ಟ್‌ ಸಮಿತಿಯಿ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಸಿಜೆಐ ರಂಜನ್ ಗೋಗಯ್ ವಿರುದ್ದ ಮಾಜಿ ಮಹಿಳಾ ಸಿಬ್ಬಂದಿಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮೂವರು ನ್ಯಾಯಮೂರ್ತಿಗಳ ಸಮಿತಿ ಕ್ಲೀನ್ ಚಿಟ್ ನೀಡಿದೆ.  ಸಿಜೆಐ ರಂಜನ್ ಗೋಗಯ್  ವಿರುದ್ದದ ಆರೋಪ ಸತ್ಯಕ್ಕೆ ದೂರವಾದದ್ದು, ಪ್ರಕರಣಕ್ಕೆ ಯಾವುದೇ ಸಾಕ್ಷಿಗಳು ಇಲ್ಲ ಎಂದು ಸುಪ್ರೀಂ ಸಮಿತಿ ತಿಳಿಸಿದೆ.

Key words: CJI -Ranjan Gogoi – clean chit – sexual harassment -case.