Sunday, August 23, 2026

BDA Apartments

Home Front Page ಕ್ರಿಕೆಟಿಗ ಕುಲದೀಪ್ ಯಾದವ್’ಗೆ ಕೋವಿಡ್ ಲಸಿಕೆ ಸಂಕಷ್ಟ !

ಕ್ರಿಕೆಟಿಗ ಕುಲದೀಪ್ ಯಾದವ್’ಗೆ ಕೋವಿಡ್ ಲಸಿಕೆ ಸಂಕಷ್ಟ !

ಬೆಂಗಳೂರು, ಮೇ 19, 2021 (www.justkannada.in): ಕ್ರಿಕೆಟಿಗ ಕುಲದೀಪ್ ಯಾದವ್  ಅವರಿಗೆ ಕೋವಿಡ್ ಲಸಿಕೆ ಸಂಕಷ್ಟ ಎದುರಾಗಿದೆ.

ಗೆಸ್ಟ್ ಹೌಸ್ ನಲ್ಲಿ ಕೋವಿಡ್ ಲಸಿಕೆ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಕಾನ್ಪುರ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ.

ಸ್ಲಾಟ್ ಕಾಯ್ದಿರಿಸಿದ ಆಸ್ಪತ್ರೆಯಲ್ಲಿ ಅಲ್ಲದೇ ಅತಿಥಿ ಗೃಹದಲ್ಲಿ ಕೊರೊನಾವೈರಸ್ ಲಸಿಕೆ ನೀಡಲಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ಎದುರಾಗಿದೆ.

ಕಳೆದ ಶನಿವಾರ ಕೋವಿಡ್ ಲಸಿಕೆ ಪಡೆದಿದ್ದ ಕುಲದೀಪ್ ಯಾದವ್ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋ ಅಪ್ಲೋಡ್ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.