ಕೋವಿಡ್’ನಿಂದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಚೇತರಿಕೆ: ಇಂಗ್ಲೆಂಡ್ ಪ್ರವಾಸಕ್ಕೆ ಗ್ರೀನ್ ಸಿಗ್ನಲ್

ಬೆಂಗಳೂರು, ಮೇ 19, 2021 (www.justkannada.in): ಕನ್ನಡಿಗ ಪ್ರಸಿದ್ಧ್ ಕೃಷ್ಣ ಮತ್ತು ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಕೋವಿಡ್-19ನಿಂದ ಗುಣಮುಖರಾಗಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ವೇಳೆ ಮಿಶ್ರಾಗೆ ಸೋಂಕು ತಗುಲಿತ್ತು. ಐಪಿಎಲ್ ಅಮಾನತಾಗಿ ಕೆಲ ದಿನಗಳಲ್ಲಿ ಪ್ರಸಿದ್ಧ್‌ಗೂ ಕೋವಿಡ್ ದೃಢಪಟ್ಟಿತ್ತು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿರುವ ಪ್ರಸಿದ್ಧ್ ಕೃಷ್ಣ, ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡುತ್ತಿದ್ದ ಅಮಿತ್ ಮಿಶ್ರಾಗೂ ಸೋಂಕು ತಗುಲಿತ್ತು.

ಪ್ರಸಿದ್ಧ್‌ಗೆ ಕೋವಿಡ್ ನೆಗೆಟಿವ್ ಬಂದಿರುವುದರಿಂದ ಅವರಿನ್ನು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಬಹುದಾಗಿದೆ.