ಕೊರೊನಾ ಬಂದ್ರೆ ಸರಣಿಯಿಂದಲೇ ಔಟ್ ! ಆಟಗಾರರಿಗೆ ಬಿಸಿಸಿಐ ವಾರ್ನಿಂಗ್

ಬೆಂಗಳೂರು, ಮೇ 13, 2021 (www.justkannada.in): ಕೊರೊನಾ ಸೋಂಕಿಗೆ ತುತ್ತಾದರೆ ಆ ಆಟಗಾರರನ್ನು ಸರಣಿಯಿಂದಲೇ ಹೊರಕಳುಹಿಸಲಾಗುವುದು ಎಂಬ ಎಚ್ಚರಿಕೆಯನ್ನು ಬಿಸಿಸಿಐ ಆಟಗಾರರಿಗೆ ನೀಡಿದೆ.

ಹೌದು. ಮುಂದಿನ ಸರಣಿಗಳಲ್ಲಿ ಆಡುವ ಕೊಹ್ಲಿ ಪಡೆಗೆ ಬಿಸಿಸಿಐ ಖಡಕ್ ವಾರ್ನಿಂಗ್ ನೀಡಿದೆ. ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಮತ್ತು ಇಂಗ್ಲೆಂಡ್ ಪ್ರವಾಸದ ಹಿನ್ನಲೆಯಲ್ಲೇ ಈ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಬಳಿಕ ಟೀಮ್ ಇಂಡಿಯಾ, ಇಂಗ್ಲೆಂಡ್ ಪ್ರವಾಸದಲ್ಲಿ ಐದು ಟೆಸ್ಟ್ ಪಂದ್ಯಗಳನ್ನಾಡಿದೆ. ಈಗಾಗಲೇ ಆಯ್ಕೆ ಸಮಿತಿ ಇಂಗ್ಲೆಂಡ್ ಪ್ರವಾಸಕ್ಕೆ ಕೊಹ್ಲಿ ಸೈನ್ಯವನ್ನ ಪ್ರಕಟಿಸಿದೆ. ಜೂನ್ 2ರಂದು ಟೀಂ ಇಂಡಿಯಾ ಇಂಗ್ಲೆಂಡ್ಗೆ ಪ್ರಯಾಣಿಸಲಿದೆ.