ಟೀಂ ಇಂಡಿಯಾಗೆ ಆಟಗಾರರಿಗೆ ಕಡ್ಡಾಯವಾಗಿ ಕೋವಿಶೀಲ್ಡ್ ಲಸಿಕೆಯನ್ನೇ ಬಳಸುವಂತೆ ಬಿಸಿಸಿಐ ಸೂಚನೆ

ಬೆಂಗಳೂರು, ಮೇ 13, 2021 (www.justkannada.in): ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾದ 24 ಆಟಗಾರರು ಮತ್ತು ಇತರ ಸಿಬ್ಬಂದಿ ಕೋವಿಶೀಲ್ಡ್ ಲಸಿಕೆ ಪಡೆಯುವಂತೆ ಬಿಸಿಸಿಐ ಸೂಚನೆ ನೀಡಿದೆ.

ಐಪಿಎಲ್ ಆರಂಭಕ್ಕೂ ಮೊದಲು ಕೆಲ ಫ್ರಾಂಚೈಸ್‍ಗಳು ಆಟಗಾರರು ಕೊರೊನಾ ಲಸಿಕೆ ಪಡೆಯಬಹುದೆ ಎಂದು ಬಿಸಿಸಿಐನೊಂದಿಗೆ ಕೇಳಿತ್ತು. ಆಗ ಇದನ್ನು ಬಿಸಿಸಿಐ ನಿರಾಕರಿಸಿತ್ತು.

ಇದೀಗ ಬಿಸಿಸಿಐ ಎಲ್ಲಾ ಆಟಗಾರರು ಕೊರೊನಾ ಲಸಿಕೆ ಪಡೆದುಕೊಳ್ಳಬಹುದು ಎಂದು ತಿಳಿಸಿದೆ. ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಕೋವಿಶೀಲ್ಡ್ ಲಸಿಕೆಯನ್ನೇ ಪಡೆಯಬೇಕು ಎಂದು ಸೂಚನೆ ಹೊರಡಿಸಿದೆ.