Wednesday, October 14, 2026

Dasara Wishes

Strengthening DasraWishes_JK DasraWishes JK
Happy Dasara
Home Crime ಮೈಸೂರಿನ ಯಾವ ಆಸ್ಪತ್ರೆಯಲ್ಲೂ ಚಿಕಿತ್ಸೆ ಸಿಗದೇ ಆಟೋದಲ್ಲೇ ಪ್ರಾಣಬಿಟ್ಟ…

ಮೈಸೂರಿನ ಯಾವ ಆಸ್ಪತ್ರೆಯಲ್ಲೂ ಚಿಕಿತ್ಸೆ ಸಿಗದೇ ಆಟೋದಲ್ಲೇ ಪ್ರಾಣಬಿಟ್ಟ…

ಮೈಸೂರು, ಮೇ 09, 2021 (www.justkannada.in): ಆಸ್ಪತ್ರೆ ಬೆಡ್ ಸಿಗದೆ ನಾನ್ ಕೋವಿಡ್ ವ್ಯಕ್ತಿ ಆಟೋದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಮೈಸೂರಿನಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಶ್ರೀಕಾಂತ್ (34) ಮೃತರು.

ಶ್ರೀಕಾಂತ್ ಮೈಸೂರು ಜಿಲ್ಲೆ ಕೆ ಆರ್ ನಗರ ತಾಲ್ಲೂಕು ಮಿರ್ಲೆ ಗ್ರಾಮದ ನಿವಾಸಿ ಶ್ರೀಕಾಂತ್, ಮನೆಗೆ ಬಣ್ಣ ಹೊಡೆಯುವ ಕೆಲಸ ಮಾಡುತ್ತಿದ್ದರು.

ಬೆಳಗೊಳದ ಬಳಿ ಮನೆಗೆ ಬಣ್ಣ ಹೊಡೆಯುವಾಗ ಶ್ರೀಕಾಂತ್ ಏಣಿಯಿಂದ ಜಾರಿ ಕೆಳಗೆ ಬಿದ್ದಿದ್ದರು. ಈ ವೇಳೆ ಕೈ ಸೇರಿ ದೇಹದ ಹಲವು ಕಡೆ ಗಂಭೀರ ಸ್ವರೂಪದ ಗಾಯವಾಗಿತ್ತು.

ಕೋವಿಡ್ ಹಿನ್ನೆಲೆ ಯಾವ ಆಸ್ಪತ್ರೆಯಲ್ಲೂ ಚಿಕಿತ್ಸೆ ಸಗದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು ಶ್ರೀಕಾಂತ್ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.