Sunday, August 23, 2026

BDA Apartments

Home Front Page ಬೆಳಗಾವಿ ಉಪಚುನಾವಣೆ ಫಲಿತಾಂಶ: ಬಿಜೆಪಿ ಹೈಕಮಾಂಡ್ ಗರಂ, ವರದಿಗೆ ಸೂಚನೆ

ಬೆಳಗಾವಿ ಉಪಚುನಾವಣೆ ಫಲಿತಾಂಶ: ಬಿಜೆಪಿ ಹೈಕಮಾಂಡ್ ಗರಂ, ವರದಿಗೆ ಸೂಚನೆ

ಬೆಂಗಳೂರು, ಮೇ 09, 2021 (www.justkannada.in): ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶದ ಬಗ್ಗೆ ವರದಿ ನೀಡುವಂತೆ ದೆಹಲಿ ವರಿಷ್ಟರು ರಾಜ್ಯ ಘಟಕದ ನಾಯಕರಿಗೆ ಸೂಚನೆ ನೀಡಿದ್ದಾರೆ.

ಅಸಮಾಧಾನ ಹೊರಹಾಕಿರುವ ಹೈಕಮಾಂಡ್ ನಾಯಕರು, ಕಡಿಮೆ ಅಂತರದಿಂದ ಗೆಲುವು ಸಾಧಿಸಿರುವುದಕ್ಕೆ ಬಿಜೆಪಿ ವರಿಷ್ಠರು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ರಾಜ್ಯ ಬಿಜೆಪಿ. ಉಸ್ತುವಾರಿ ಅರುಣ್ ಸಿಂಗ್ ಈ ಸಂಬಂಧ ಕಾರಣ ರಾಜ್ಯ ಬಿಜೆಪಿ ನಾಯಕರಿಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಶಾಸಕರಿರುವ ಕ್ಷೇತ್ರಗಳಾದ ಸವದತ್ತಿ, ರಾಮದುರ್ಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬಿಜೆಪಿ ಮತ ಬಾರದಿರುವುದು ಹಾಗೂ ಬೆಳಗಾವಿ ಉತ್ತರ, ದಕ್ಷಿಣ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಎಂ ಇ ಎಸ್ ಅಭ್ಯರ್ಥಿ ಹೆಚ್ಚು ಮತ ಪಡೆದಿರುವುದೇ ಕಾರಣ ಎಂದು ರಾಜ್ಯ ನಾಯಕರು ಸಮಜಾಯಿಸಿ ನೀಡಿದ್ದರು.

ಇದನ್ನು ಒಪ್ಪದ ಅರುಣ್ ಸಿಂಗ್ ಲೋಕಸಭಾ ಕ್ಷೇತ್ರದ ವಿಧಾನಸಭಾವಾರು ವರದಿ ಸಲ್ಲಿಸುವಂತೆ ಅರುಣ್ ಸಿಂಗ್ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.