ಸರಕಾರಕ್ಕೆ ಜನರ ಜೀವಕ್ಕಿಂತ ತೆರಿಗೆ ಆದಾಯವೇ ಮುಖ್ಯ: ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ

ಬೆಂಗಳೂರು, ಮೇ 09, 2021 (www.justkannada.in): ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ದೂರಿದ್ದಾರೆ.

ಸರಕಾರ ಜಾರಿ ಮಾಡಿರುವ ಸೆಮಿಲಾಕ್ ಡೌನ್ ಗೆ ಅರ್ಥವಿಲ್ಲ. ಜನರ ಆರೋಗ್ಯ ಕಾಪಾಡುವ ನಿಜವಾದ ಕಳಕಳಿ ಸಿಎಂ, ಸರ್ಕಾರಕ್ಕೆ ಇದ್ದರೆ, ಕಳೆದ ವರ್ಷದಂತೆ ಸಂಪೂರ್ಣ ಲಾಕ್ ಡೌನ್ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೋವಿಡ್ ಮಾರ್ಗಸೂಚಿ ಗಮನಿಸಿದರೆ, ಸರ್ಕಾರಕ್ಕೆ ಕೊರೊನ ಹೋಗುವುದು ಬೇಕಿಲ್ಲ. ಜನರ ಜೀವಕ್ಕಿಂತ ತೆರಿಗೆ, ಆದಾಯವೇ ಮುಖ್ಯವಾಗಿದೆ ಎಂದು ಟೀಕಿಸಿದ್ದಾರೆ.

ತಾಲ್ಲೂಕು ಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿ ಇಲ್ಲ. ನೇಮಕವಾಗಿರುವ ವೈದ್ಯರಿಗೂ ನೇಮಕಾತಿ ಆದೇಶ ನೀಡಿಲ್ಲ. ಗುತ್ತಿಗೆ ಆಧಾರದ ಮೇಲಾದರೂ ತಕ್ಷಣ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು‌.