Sunday, August 23, 2026

BDA Apartments

Home Front Page ನಾಳೆಯಿಂದ ಸಂಪೂರ್ಣ ಲಾಕ್’ಡೌನ್: ಮದುವೆಗಳಿಗೆ ಹೊಸ ಮಾರ್ಗಸೂಚಿ

ನಾಳೆಯಿಂದ ಸಂಪೂರ್ಣ ಲಾಕ್’ಡೌನ್: ಮದುವೆಗಳಿಗೆ ಹೊಸ ಮಾರ್ಗಸೂಚಿ

ಬೆಂಗಳೂರು, ಮೇ 09, 2021 (www.justkannada.in): ರಾಜ್ಯ ಸರಕಾರ ನಾಳೆಯಿಂದ 14 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದೆ.

ಇದಕ್ಕಾಗಿ ಕೆಲ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಆದರೆ ಕೆಲವು ಅಂಶಗಳಲ್ಲಿ ಬದಲಾವಣೆ ಮಾಡಲಾಗಿದೆ.

ಪರಿಷ್ಕೃತ ಮಾರ್ಗಸೂಚಿಯ ಪ್ರಕಾರ ಮದುವೆಯಲ್ಲಿ 40 ಜನರು ಭಾಗವಹಿಸಬಹುದು. ಮೊದಲು ವಿವಾಹ ಕಾರ್ಯಕ್ರಮದಲ್ಲಿ 50 ಜನರು ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು.

ಲಾಕ್ ಡೌನ್ ಜಾರಿಯಲ್ಲಿರುವ ಅವಧಿಯಲ್ಲಿ ಈಗಾಗಲೇ ನಿಗದಿಯಾಗಿರುವ ವಿವಾಹಗಳನ್ನು ಮನೆಯಲ್ಲಿ ನಡೆಸಬಹುದು.

ಆದರೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪರಿಷ್ಕೃತ ಆದೇಶದಲ್ಲಿ ತಿಳಿಸಲಾಗಿದೆ.