Wednesday, July 29, 2026

BDA Apartments

Home Cinema ‘ಆದಿಪುರುಷ’ ಚಿತ್ರದಲ್ಲಿ ಪ್ರಭಾಸ್ ಜತೆ ಕಿಚ್ಚ ಸುದೀಪ್!

‘ಆದಿಪುರುಷ’ ಚಿತ್ರದಲ್ಲಿ ಪ್ರಭಾಸ್ ಜತೆ ಕಿಚ್ಚ ಸುದೀಪ್!

ಬೆಂಗಳೂರು, ಮೇ 08, 2021 (www.justkannada.in): ಪ್ರಭಾಸ್ ಪೌರಾಣಿಕ ಹಿನ್ನಲೆಯಲ್ಲಿರುವ ರಾಮಾಯಣ ಕಥೆಯನ್ನಾಧರಿಸಿದ ‘ಆದಿಪುರುಷ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಚಿತ್ರವನ್ನು ಬಾಲಿವುಡ್ ನಿರ್ದೇಶಕ ಓಂ ರೌತ್ ನಿರ್ದೆಶಿಸುತ್ತಿದ್ದಾರೆ. ವಿಶೇಷ ಎಂದರೆ ಚಿತ್ರದಲ್ಲಿ ನಟ ಕಿಚ್ಚ ಸುದೀಪ್ ಕೂಡ ನಟಿಸುತ್ತಿದ್ದಾರೆ.

ಪ್ರಭಾಸ್ ರಾಮನ ಪಾತ್ರ ಮಾಡಿದರೆ, ಸೈಫ್ ಅಲಿ ಖಾನ್ ರಾವಣ ಪಾತ್ರವನ್ನು ನಿರ್ವಹಿಸಲಿದ್ದಾರಂತೆ. ಕೃತಿ ಸನೋನ್ ಸೀತೆ ಪಾತ್ರ ಮಾಡಲಿದ್ದಾರೆ. ರಾವಣನ ಸಹೋದರ ವಿಭೀಷಣನ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಆದರೆ ಈ ಕುರಿತು ಚಿತ್ರತಂಡವಾಗಲೀ, ಸುದೀಪ್ ಅವರಾಗಲೀ ಖಚಿತಪಡಿಸಿಲ್ಲ.