Wednesday, July 29, 2026

BDA Apartments

Home Front Page ಟೀಂ ಇಂಡಿಯಾ ಆಟಗಾರರಿಗೆ ಟೆಸ್ಟ್ ಚಾಂಪಿಯನ್’ಶಿಪ್’ಗೂ ಮುನ್ನ ಕ್ವಾರಂಟೈನ್ ಟೆಸ್ಟ್ !

ಟೀಂ ಇಂಡಿಯಾ ಆಟಗಾರರಿಗೆ ಟೆಸ್ಟ್ ಚಾಂಪಿಯನ್’ಶಿಪ್’ಗೂ ಮುನ್ನ ಕ್ವಾರಂಟೈನ್ ಟೆಸ್ಟ್ !

ಬೆಂಗಳೂರು, ಮೇ 08, 2021 (www.justkannada.in): ಇಂಗ್ಲೆಂಡ್ ಗೆ ತೆರಳುವ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರು ಕಠಿಣ ಕ್ವಾರಂಟೈನ್ ಗೊಳಗಾಗಬೇಕಿದೆ.

ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳಲು ಇಂಗ್ಲೆಂಡ್ ಗೆ ತೆರಳುವ ಮೊದಲು ಮುಂಬೈನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಬಿಸಿಸಿಐ ನಿಗದಿಪಡಿಸಿದ ಹೋಟೆಲ್ ನಲ್ಲಿಯೇ ಒಂದು ವಾರ ಕಠಿಣ ಕ್ವಾರಂಟೈನ್ ಗೊಳಗಾಗಬೇಕು.

ಬಳಿಕ ಮೇ ಅಂತಿಮ ವಾರದಲ್ಲಿ ಕೊರೋನಾ ನೆಗೆಟಿವ್ ವರದಿ ಇದ್ದರೆ ಮಾತ್ರ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿನ ನಿಯಮಗಳ ಪ್ರಕಾರ ಕ್ವಾರಂಟೈನ್ ಗೊಳಗಾಗಬೇಕು. ಬಳಿಕವಷ್ಟೇ ಅಭ್ಯಾಸಕ್ಕೆ ಇಳಿಯಬೇಕಾಗುತ್ತದೆ.