Sunday, August 23, 2026

BDA Apartments

Home Front Page ಮೇ.10ರಿಂದ 24ರವರೆಗೆ ತಮಿಳುನಾಡಿನಲ್ಲಿ ಲಾಕ್ ಡೌನ್ ಘೋಷಣೆ….

ಮೇ.10ರಿಂದ 24ರವರೆಗೆ ತಮಿಳುನಾಡಿನಲ್ಲಿ ಲಾಕ್ ಡೌನ್ ಘೋಷಣೆ….

ಚೆನ್ನೈ,ಮೇ,8,2021(www.justkannada.in): ದೇಶದಲ್ಲಿ ಕೊರೋನಾ ಮಹಾಮಾರಿ ಹೆಚ್ಚಳವಾಗುತ್ತಿದ್ದು, ಕರ್ನಾಟಕ ಸೇರು ಹಲವು ರಾಜ್ಯಗಳು ಲಾಕ್ ಡೌನ್ ಘೋಷಣೆ ಮಾಡಿವೆ. ಈ ಮಧ್ಯೆ ಇದೀಗ ತಮಿಳುನಾಡಿನಲ್ಲೂ  ಮೇ 10 ರಿಂದ 24ರವರೆಗೆ ಲಾಕ್ ಡೌನ್ ಘೋಷಿಸಿ ಸಿಎಂ ಎಂ.ಕೆ ಸ್ಟಾಲಿನ್ ಆದೇಶ ಹೊರಡಿಸಿದ್ದಾರೆ.jk

ದಿನೇ ದಿನೇ ಹೆಚ್ಚಳವಾಗುತ್ತಿರುವ ಕೊರೋನಾ  ಸೋಂಕಿನ ಪ್ರಮಾಣವನ್ನ ತಗ್ಗಿಸುವ ಸಲುವಾಗಿ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ. ಬೆಳಿಗ್ಗೆ 6 ರಿಂದ 12 ಗಂಟೆವರೆಗೆ ಅಗತ್ಯವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು ನಂತರ ಎಲ್ಲವೂ ಬಂದ್ ಆಗಲಿದೆ.

ನಿನ್ನೆಯಷ್ಟೆ ಸಿಎಂ ಎಂ.ಕೆ ಸ್ಟಾಲಿನ್ ತಮಿಳುನಾಡಿನ ಜನತೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ಈ ಬೆನ್ನಲ್ಲೆ ಇದೀಗ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ.

Key words: Lockdown -Declaration -Tamil Nadu -May 10-24.