Thursday, October 15, 2026

Dasara Wishes

Happy Dasara
Home Cinema ಬೆಂಗಳೂರಿನ ಚಿತಾಗಾರ ಸಿಬ್ಬಂದಿ ನೆರವಿಗೆ ಧಾವಿಸಿದ ನಟಿ ರಾಗಿಣಿ

ಬೆಂಗಳೂರಿನ ಚಿತಾಗಾರ ಸಿಬ್ಬಂದಿ ನೆರವಿಗೆ ಧಾವಿಸಿದ ನಟಿ ರಾಗಿಣಿ

ಬೆಂಗಳೂರು, ಮೇ 07, 2021 (www.justkannada.in): 

ನಟಿ ರಾಗಿಣಿ ದ್ವಿವೇದಿ ಚಿತಾಗಾರ ಸಿಬ್ಬಂದಿ ನೆರವಿಗೆ ಬಂದಿದ್ದಾರೆ.

ಕೊರೊನಾ ಸಂದರ್ಭದಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ ರಾಗಿಣಿ. ಚಿತಾಗಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಊಟ ನೀಡುವ ಮೂಲಕ ನೆರವಾಗುತ್ತಿದ್ದಾರೆ.

ಚಿತಾಗಾರ ಹಾಗೂ ರುದ್ರಭೂಮಿಯ ಕೆಲಸಗಾರರಿಗೆ ದಿನಸಿ ಕಿಟ್ ಹಂಚುತ್ತಿರುವ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಕಳೆದ ವರ್ಷ ಲಾಕ್‍ಡೌನ್‍ನಲ್ಲೂ ರಾಗಿಣಿ ದ್ವಿವೇದಿ ನಿರಾಶ್ರಿತರಿಗೆ ಹಾಗೂ ಬಡವರಿಗೆ ದಿನಸಿ ಹಾಗೂ ಆಹಾರ ನೀಡುವ ಮೂಲಕ ನೆರವಾಗಿದ್ದರು.