Thursday, October 15, 2026

Dasara Wishes

Happy Dasara
Home Cinema ಅನುಪಮ್ ಖೇರ್’ಗೆ ನ್ಯೂಯಾರ್ಕ್ ಸಿಟಿ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ಗರಿ

ಅನುಪಮ್ ಖೇರ್’ಗೆ ನ್ಯೂಯಾರ್ಕ್ ಸಿಟಿ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ಗರಿ

ಬೆಂಗಳೂರು, ಮೇ 07, 2021 (www.justkannada.in): ನ್ಯೂಯಾರ್ಕ್ ಸಿಟಿ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಹಿರಿಯ ನಟ ಅನುಪಮ್ ಖೇರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಹ್ಯಾಪಿ ಬರ್ತಡೇ ಕಿರುಚಿತ್ರದ ನಟನೆಗೆ ಅನುಪಮ್ ಖೇರ್ ಅತ್ಯುತ್ತಮ ನಟ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಕೊರೊನಾ ಸಂಕಷ್ಟದ ಈ ಸ್ಥಿತಿಯಲ್ಲೂ ಪ್ರಶಸ್ತಿ ಮುಡಿಗೇರಿಸಿಕೊಂಡಿರುವುದಕ್ಕೆ ನಟ ಅನುಪಮ್ ಸಾಮಾಜಿಕ ಜಾಲತಾಣದ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ.

ಪ್ರಸಾದ್ ಕದಮ್ ಸಾರಥ್ಯದಲ್ಲಿ ಮೂಡಿಬಂದ ಈ ಕಿರುಚಿತ್ರದಲ್ಲಿ ಅನುಪಮ್ ಮತ್ತು ಅಹಾನಾ ಕುಮ್ರಾ ಅಭಿನಯ ವರ್ಷದ ಬಹುನಿರೀಕ್ಷೆಯ ಕಿರುಚಿತ್ರಗಳಲ್ಲಿ ಹ್ಯಾಪಿ ಬರ್ತಡೇ ಕೂಡ ಒಂದಾಗಿದೆ.