Monday, October 5, 2026

BDA Apartments

ಪ್ರಧಾನಿ ಮೋದಿ ಭೇಟಿಯಾಗಿ BDA JK_Adv BDA Adv
Home Cinema ಸಿನಿಮಾ-ರಾಜಕೀಯ ‘ಮುಳುಗಿದ ಹಡಗು’ ಎಂದ ರಮ್ಯಾ

ಸಿನಿಮಾ-ರಾಜಕೀಯ ‘ಮುಳುಗಿದ ಹಡಗು’ ಎಂದ ರಮ್ಯಾ

ಬೆಂಗಳೂರು, ಏಪ್ರಿಲ್ 26, 2021 (www.justkannada.in): ನಟಿ ರಮ್ಯಾ ಸಿನಿಮಾ ಹಾಗೂ ರಾಜಕೀಯ ಎರಡೂ ಕ್ಷೇತ್ರಕ್ಕೂ ಗುಡ್ ಬೈ ಹೇಳಿದ್ದಾರೆ.

ನಟನೆ ಎಂಬ ಹಡಗು ಮುಳುಗಿ ತುಂಬಾ ದಿನಗಳೇ ಕಳೆದು ಹೋಗಿವೆ. ಸಿನಿಮಾ ಮೇಲಿನ ಆಸೆಯನ್ನು ಕಳೆದುಕೊಂಡಿದ್ದೇನೆ ಎಂದು ರಮ್ಯಾ ಹೇಳಿದ್ದಾರೆ.

ನಿನ್ನೆ ಇನ್ ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಇನ್ನೆಂದೂ ಮತ್ತೆ ಬಣ್ಣದ ಲೋಕಕ್ಕೆ ಬರಲ್ಲ ಎಂದಿದ್ದಾರೆ. ನನಗೆ ನಟಿಸಲು ಆಸಕ್ತಿಯೂ ಇಲ್ಲ ಎಂದಿದ್ದಾರೆ. ರಾಜಕೀಯವಾಗಿಯೂ ಆಸಕ್ತಿ ಇಲ್ಲ ಎಂದಿದ್ದಾರೆ.

ಅಂದಹಾಗೆ ರಮ್ಯಾ ಅಭಿನಯದ ಮೊದಲ ಸಿನಿಮಾ ‘ಅಭಿ’ ತೆರೆಕಂಡು ಕಳೆದ ನಿನ್ನೆಗೆ 18 ವರ್ಷ ಪೂರೈಸಿತ್ತು

‘ನನ್ನ ರಾಜಕೀಯದ ಸಮಯವೂ ಮುಗಿದಿದೆ’ ಎನ್ನುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಹುಟ್ಟಿಸಿದ್ದಾರೆ ರಮ್ಯಾ.