ಮೈಸೂರಿನಲ್ಲಿ ನೂತನ ಕೋವಿಡ್ ಕೇರ್ ಸೆಂಟರ್ ಆರಂಭಕ್ಕೆ ಸಿದ್ದತೆ: ಮುಡಾ ಅಧ್ಯಕ್ಷರಿಂದ ಸ್ಥಳ ಪರಿಶೀಲನೆ…

ಮೈಸೂರು,ಏಪ್ರಿಲ್,26,2021(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು,  ಈ ಮಧ್ಯೆ ಮೈಸೂರು ಜಿಲ್ಲಾಡಳಿತ,  ಮಹಾನಗರ ಪಾಲಿಕೆ, ಮುಡಾ ನೇತೃತ್ವದಲ್ಲಿ ನೂತನ ಕೋವಿಡ್ ಕೇರ್ ಸೆಂಟರ್ ಆರಂಭಕ್ಕೆ ಸಿದ್ದತೆ ನಡೆಸಲಾಗಿದೆ.jk

ಮೈಸೂರಿನ ಕೆ.ಆರ್ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ತುಳಸಿದಾಸ್ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬಳಸಲು ತೀರ್ಮಾನ ಮಾಡಲಾಗಿದೆ. ಆಸ್ಪತ್ರೆ ಉದ್ಘಾಟನೆಗು ಮುನ್ನ ಕೋವಿಡ್ ಕೇರ್ ಸೆಂಟರ್ ಮಾಡಲು ನಿರ್ಧರಿಸಲಾಗಿದ್ದು, ಕೋವಿಡ್ ಕೇರ್ ಸೆಂಟರ್ ನಿರ್ವಹಣೆ ಜವಬ್ದಾರಿ ಕಾವೇರಿ ಆಸ್ಪತ್ರೆ ವಹಿಸಿಕೊಳ್ಳಲಿದೆ. ವಾಲೆಂಟಿಯರ್ ಆಗಿ ಜವಾಬ್ದಾರಿ ವಹಿಸಿಕೊಳ್ಳಲು ಕಾವೇರಿ ಆಸ್ಪತ್ರೆ ಮುಂದೆ ಬಂದಿದೆ. ಒಂದು ವಾರದೊಳಗೆ ಕೋವಿಡ್ ಕೇರ್ ಸೆಂಟರ್ ಕಾರ್ಯಾರಂಭ ಮಾಡಲಿದೆ.

ಈ ಹಿನ್ನೆಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ರಾಜೀವ್ ಅವರು ಇಂದು ತುಳಸಿದಾಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ನಡೆದರು. ಮುಡಾ ಅಧ್ಯಕ್ಷರಿಗೆ ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಕಾವೇರಿ ಆಸ್ಪತ್ರೆ ವೈದ್ಯ ಡಾ.ಚಂದ್ರಶೇಖರ್ ಸಾಥ್ ನೀಡಿದರು.

ಪರಿಶೀಲನೆ ಬಳಿಕ ಮಾತನಾಡಿದ ಮುಡಾ ಅಧ್ಯಕ್ಷ ರಾಜೀವ್, ಮೈಸೂರಿನಲ್ಲಿ ಕೊರೊನಾ ಸಂಖ್ಯೆ ದಿನದಿಂದ ದಿನಕ್ಕೆ  ಏರುಪೇರು ಬರುತ್ತಿದೆ. ಮೈಸೂರಿನಲ್ಲಿ ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್ ಗಳ ಸಂಖ್ಯೆ ಹೆಚ್ಚಿದೆ ಎಂದು ಹೇಳಲು ಆಗಲ್ಲ. ಕೊರೋನಾ ನಾಶ ಮಾಡಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಕಳೆದ ಬಾರಿ ಸಚಿವರು ಮೈಸೂರಿಗೆ ಬಂದಾಗ ತುಳಸಿದಾಸಪ್ಪ ಆಸ್ಪತ್ರೆಯನ್ನ ಬಳಸಿಕೊಳ್ಳಿ ಅಂತ ನಮಗೆ ಸೂಚನೆ ನೀಡಿದ್ದರು. ಈ ಭಾಗದ ಶಾಸಕರಾದ ರಾಮದಾಸ್ ಸಹ ಇದರ ಬಗ್ಗೆ ಚರ್ಚೆ ನಡೆಸಿದ್ದರು. ನಂತರ ನಾವೆಲ್ಲಾ ಸೇರಿ ಇದರ ಬಗ್ಗೆ ಚರ್ಚೆ ನಡೆಸಲಾಗಿತ್ತು. ಇದಕ್ಕೆ ಪಾಲಿಕೆಯವರು ನಮಗೆ ಸಹಕಾರ ನೀಡಿದ್ದಾರೆ‌. ಇದಕ್ಕೆ ಬೇಕಾಗುವ ಸಹಕಾರವನ್ನು ಮೂಡಾ ನೀಡುತ್ತಿದೆ ಎಂದರು.new-covid-care-center-mysore-muda-president-rajeev-location-inspection

ಈಗಾಗಲೇ ಹಲವು ಕೆಲಸ ಕಾರ್ಯಗಳು ನಡೆಯುತ್ತಿವೆ. ಇನ್ನೂ ಸ್ಪಲ್ವ ಕೆಲಸ ಕಾರ್ಯ ಮಾತ್ರ ಬಾಕಿ ಇದೆ. ಅತಿ ಶೀಘ್ರದಲ್ಲಿ ಆಸ್ಪತ್ರೆ ಪ್ರಾರಂಭವಾಗಲಿದೆ. ಜನರು ಈಗಾಗಲೇ ಹೆಚ್ಚು ಭಯಕ್ಕೆ ಒಳಗಾಗಿದ್ದಾರೆ. ಅದನ್ನ‌ ನೀಗಿಸಲು ನಾವು ಈ ಕ್ರಮಕ್ಕೆ ಬಂದಿದ್ದೇವೆ. ಮೈಸೂರಿನ ಜನತೆ ಯಾವುದೇ ಆತಂಕಕ್ಕೆ ಒಳಗಾಗಬೇಡಿ ಎಂದು ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಹೇಳಿದರು.

ENGLISH SUMMARY….

Preparation to start new COVID care centre in Mysuru: Spot inspection by MUDA Chairman
Mysuru, Apr. 26, 2021 (www.justkannada.in): The number of Corona cases is increasing in the cultural capital of Karnataka, Mysuru. In the meantime, the District administration, Mysore City Corporation, and MUDA are jointly making preparations to start a new COVID care centre in the city to handle the cases.new-covid-care-center-mysore-muda-president-rajeev-location-inspection
It has been decided to use the Tulasidas Hospital, in K.R. Assembly Constituency as a COVID care centre. The construction of the new hospital building was completed recently. It was decided to make it a COVID care centre even before its inauguration. Kaveri Hospital in the city has voluntarily come forward to manage the new COVID care centre. Thus, the new COVID care centre will start functioning within a week.
In this context, MUDA Chairman Rajeev visited the Tulasidas Hospital today and inspected the preparations. MCC Commissioner Shilpa Nag, Dr. Chandrashekar of Kaveri Hospital accompanied him.
Keywords: COVID-19 Pandemic/ New COVID care centre in Mysuru/ Tulasidas Hospital/ Kaveri Hospital to manage\

Key words: New -covid Care Center – Mysore- Muda President- Rajeev- Location- Inspection