Friday, August 14, 2026

BDA Apartments

Home Front Page ಮುಂದೂಡಿಕೆಯಾಗಿದ್ದ ‘ಕೆ-ಸೆಟ್ 2021’ ಪರೀಕ್ಷೆಗೆ ದಿನಾಂಕ ನಿಗದಿ….

ಮುಂದೂಡಿಕೆಯಾಗಿದ್ದ ‘ಕೆ-ಸೆಟ್ 2021’ ಪರೀಕ್ಷೆಗೆ ದಿನಾಂಕ ನಿಗದಿ….

ಮೈಸೂರು,ಏಪ್ರಿಲ್,15,2021(www,justkannada.in):  ಕಾರಣಾಂತರಗಳಿಂದ ಮೈಸೂರು ವಿಶ್ವವಿದ್ಯಾನಿಲಯ ಮುಂದೂಡಿಕೆ ಮಾಡಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಎಸ್.ಇ.ಟಿ.)ಗೆ ದಿನಾಂಕವನ್ನ ಮರುನಿಗದಿ ಮಾಡಿದೆ.

ಮೈಸೂರು ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಎಸ್.ಇ.ಟಿ.) ಯನ್ನು ದಿನಾಂಕ 11 ನೇ ಏಪ್ರಿಲ್ 2021 ರಂದು ನಡೆಸಲು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕಾರಣಾಂತರಗಳಿಂದ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಆದ್ದರಿಂದ, ಇದೀಗ ಕೆಸೆಟ್ 2021 ಪರೀಕ್ಷೆಯನ್ನು 25.04.2021(ಭಾನುವಾರ) ರಂದು ನಡೆಸಲು  ಮೈಸೂರು ವಿಶ್ವ ವಿದ್ಯಾನಿಲಯ ನಿರ್ಧರಿಸಿದೆ.Mysore university- -K-set 2021 exam-date-fix

ಕೆಸೆಟ್ 2021ರ ಪರೀಕ್ಷೆಯನ್ನು ನಡೆಸಲು ಪತ್ರದ ಮುಖಾಂತರ ಈಗಾಗಲೇ ಕರ್ನಾಟಕ ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸಾರಿಗೆ ಅಧಿಕಾರಿಗಳ ಗಮನಕ್ಕೆ ತರುತ್ತಾ ಪರೀಕ್ಷೆಯನ್ನ ಯಶಸ್ವಿಗೊಳಿಸಬೇಕು ಎಂದು ಕೆಸೆಟ್ ಕೇಂದ್ರ, ಮೌಲ್ಯಭವನ, ಮೈಸೂರು ವಿಶ್ವ ವಿದ್ಯಾನಿಲಯ ಸಂಯೋಜನಾಧಿಕಾರಿ ತಿಳಿಸಿದ್ದಾರೆ.

Key words: Mysore university- -K-set 2021 exam-date-fix