Saturday, October 17, 2026

Dasara Wishes

Happy Dasara
Home Crime ಹೆಣ್ಣುಮಗಳನ್ನ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ- ಡಿಕೆಶಿ ವಿರುದ್ದ ಸಿಡಿ ಯುವತಿ ಪೋಷಕರ ಗಂಭೀರ ಆರೋಪ…

ಹೆಣ್ಣುಮಗಳನ್ನ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ- ಡಿಕೆಶಿ ವಿರುದ್ದ ಸಿಡಿ ಯುವತಿ ಪೋಷಕರ ಗಂಭೀರ ಆರೋಪ…

 

ಬೆಂಗಳೂರು,ಮಾರ್ಚ್,27,2021(www.justkannada.in): ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಪೋಷಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಎಸ್ ಐಟಿ ವಿಚಾರಣೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯುವತಿ ಪೋಷಕರು, ನಮ್ಮ ಬಳಿ ಇದ್ದ ಸಾಕ್ಷಿಗಳಿನ್ನ ಅಧಿಕಾರಿಗಳಿಗೆ ಕೊಟ್ಟಿದ್ದೇವೆ. ಒಬ್ಬ ಹೆಣ್ಣುಮಗಳನ್ನ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಡಿಕೆಶಿ ನಮ್ಮ ಮಗಳನ್ನ ಒತ್ತೆಯಾಳು ಮಾಡಿದ್ದಾರೆ. ಹೊಲಸು ರಾಜಕಾರಣಕ್ಕೆ ಹೆಣ್ಣು ಮಕ್ಕಳನ್ನ ಏಕೆ ಬಳಸುತ್ತಿರಾ,..? ಎಂದು ಕಿಡಿಕಾರಿದರು.

ಸಿಡಿಯುವತಿ ಸಹೋದರ ಮಾತನಾಡಿ, ಅಕ್ಕನನ್ನ ಡಿ.ಕೆ ಶಿವಕುಮಾರ್ ನನ್ನ ಅಕ್ಕನನ್ನ ಗೋವಾಗೆ ಕಳುಹಿಸಿದ್ದಾರೆ. ಅಕ್ಕನ ಜತೆ ಚರ್ಚಿಸಿದ್ದ ಆಡಿಯೋ ವೈರಲ್ ಆಗಿದೆ. ನಮಗೆ ಯಾವುದೇ ರೀತಿ ಬೆದರಿಕೆ ಇಲ್ಲ.  ನಮಗೆ ಪೊಲೀಸ್ ಭದ್ರತೆ ನೀಡುತ್ತಿದ್ದಾರೆ.Ramesh jarakiholi -CD -release case-Another -video -release - young woman.

ಸಿಡಿ ಪ್ರಕರಣ ಬಹಿರಂಗವಾಗುತ್ತಿದ್ದಂತೆ ನಮ್ಮ ಅಕ್ಕ ಡಿಕೆ ಶಿವಕುಮಾರ್ ಮನೆಗೆ ತೆರಳಿದ್ದರು.   ಮಾರ್ಚ್ 2 ರಂದು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಮ್ಮ ಅಕ್ಕ ಎಲ್ಲೂ ಕಾಣುಇತ್ತಿಲ್ಲ. ನಮ್ಮ ಅಕ್ಕನನ್ನ ಮುಂದಿಟ್ಟುಕೊಂಡು ಹೀನರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Key words: cd case- women-parants-dk shivakumar