Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ಯಾರ ಪ್ರಭಾವಕ್ಕೂ ತಲೆಕೆಡಿಸಿಕೊಳ್ಳದೆ  ಸಿಡಿ ಕೇಸ್ ಬಗ್ಗೆ ನ್ಯಾಯ ಸಮ್ಮತ ತನಿಖೆ-ಗೃಹ ಸಚಿವ ಬಸವರಾಜ ಬೊಮ್ಮಾಯಿ…

ಯಾರ ಪ್ರಭಾವಕ್ಕೂ ತಲೆಕೆಡಿಸಿಕೊಳ್ಳದೆ  ಸಿಡಿ ಕೇಸ್ ಬಗ್ಗೆ ನ್ಯಾಯ ಸಮ್ಮತ ತನಿಖೆ-ಗೃಹ ಸಚಿವ ಬಸವರಾಜ ಬೊಮ್ಮಾಯಿ…

ಬೆಂಗಳೂರು,ಮಾರ್ಚ್,27,2021(www.justkannada.in): ಎಸ್ ಐಟಿ ಯಾರ ಒತ್ತಡ, ಪ್ರಭಾವಕ್ಕೆ ತಲೆಕೆಡೆಸಿಕೊಳ್ಳದೇ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಎಸ್ ಐಟಿ ನ್ಯಾಯ ಸಮ್ಮತವಾಗಿ  ತನಿಖೆ ನಡೆಸುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.jk

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಧಾರವಾಹಿಯಂತೆ ದಿನನಿತ್ಯ ವಿಡಿಯೋ ಆಡಿಯೋಗಳು ಬಿಡುಗಡೆಯಾಗುತ್ತಿವೆ. ಆಡಿಯೋ ವಿಡಿಯೋ ಇಟ್ಟುಕೊಂಡು ಎಸ್ ಐಟಿ ವೈಜ್ಞಾನಿಕವಾಗಿ ತನಿಖೆ ನಡೆಸಲಿದೆ.  ಈವರೆಗೆ ಸಿಡಿ ಪ್ರಕರಣ ಸಂಬಂಧ ಬಿಡುಗಡೆಗೊಂಡ ವಿಡಿಯೋ, ಆಡಿಯೋ ಹಾಗೂ ಸಿಡಿ ಇಟ್ಟುಕೊಂಡು ಎಸ್ ಐಟಿ ಪರಿಶೀಲನೆ ನಡೆಸಿ ಸಮಗ್ರವಾಗಿ ತನಿಖೆ ಮಾಡಲಿದೆ ಎಂದು ತಿಳಿಸಿದರು.CD case- investigation-SIT-Home Minister -Basavaraja Bommai.

ಸಿಡಿ ಪ್ರಕರಣವನ್ನು ನಿಷ್ಠುರವಾಗಿ ಸತ್ಯವನ್ನು ಕಂಡು ಹಿಡಿಯಲು ಎಸ್ ಐಟಿ ಕ್ರಮ ಕೈಗೊಳ್ಳಲಿದೆ. ದಾರಿ ತಪ್ಪಿಸುವ ಕೆಲಸ ಎಸ್ ಐಟಿಯಿಂದ ಆಗಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: CD case- investigation-SIT-Home Minister -Basavaraja Bommai.