Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ಸಿಡಿ ಪ್ರಕರಣದಲ್ಲಿ ಡಿಕೆಶಿ ಹೆಸರು ಪ್ರಸ್ತಾಪ: ನನಗೆ ಅಚ್ಚರಿ ಅನಿಸಿಲ್ಲ- ಸಚಿವ ಎಸ್.ಟಿ ಸೋಮಶೇಖರ್…

ಸಿಡಿ ಪ್ರಕರಣದಲ್ಲಿ ಡಿಕೆಶಿ ಹೆಸರು ಪ್ರಸ್ತಾಪ: ನನಗೆ ಅಚ್ಚರಿ ಅನಿಸಿಲ್ಲ- ಸಚಿವ ಎಸ್.ಟಿ ಸೋಮಶೇಖರ್…

ಮೈಸೂರು,ಮಾರ್ಚ್,27,2021(www.justkannada.in): ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ಡಿಕೆಶಿ ಹೆಸರು ಬಂದಿದ್ದು, ನನಗೆ ಅಚ್ಚರಿ ಅನಿಸಿಲ್ಲ.ಸಾಮಾಜಿಕ ಜಾಲತಾಣದಲ್ಲಿ ಮೊದಲೇ ಇದು ಚರ್ಚೆಯಲ್ಲಿತ್ತು. ಈಗ ಅದು ಹೊರಗೆ ಬಂದಿದೆ ಅಷ್ಟೇ ಎಂದಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್ , ಡಿಕೆ ಶಿವಕುಮಾರ್ ಹೆಸರು ಹೇಳು ಎಂದು ನಾವೇನಾದರು ಹೇಳಿದ್ದೇವಾ? ಆಕೆಯೇ ತಾನಾಗಿಯೇ ಆ ಹೆಸರು ಹೇಳಿದ್ದಾಳೆ. ಅಲ್ಲಿಗೆ ಇದರ ಅರ್ಥ ಏನು? ಸಿಡಿ ಪ್ರಕರಣದಲ್ಲಿ ಮಹಾನಾಯಕನ ಪಾತ್ರ ಇದೆ ಎಂಬುದು ಚರ್ಚೆಯಲ್ಲಿದೆ. ಸಂತ್ರಸ್ತೆಯೇ ಅವರ ಹೆಸರು ಹೇಳಿದ್ದಾಳೆ. ನಾವೇನು ಅವರ ಹೆಸರು ಹೇಳಿ ಎಂದು ಹೇಳಿದ್ದೇವಾ? ಆತ ಯಾರು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಮಗೂ ಇತ್ತು. ಡಿಕೆಶಿಯೇ ಮಹಾನಾಯಕನೆಂಬ ಪ್ರಶ್ನೆಗೆ ಈಗ ಅವರ ಹೆಸರು ಬಂದಿದೆ ಅಷ್ಟೇ. ಮಹಾನಾಯಕ ಯಾರು ಅಂತ ಸದ್ಯದಲ್ಲೇ ಗೊತ್ತಾಗಲಿದೆ ಎಂದು ಹೇಳಿದರು.

ಇಡೀ ಪ್ರಕರಣದಲ್ಲಿ ರಾಜಕಾರಣಿಗಳು, ಮಂತ್ರಿಗಳು ಟಾರ್ಗೆಟ್ ಆಗುತ್ತಿದ್ದಾರೆ. ಹಾಗಾಗಿ ಈ ಪ್ರಕರಣದ ಮಹಾನಾಯಕ ಯಾರು ಎಂಬ ಸತ್ಯಾಸತ್ಯತೆ ಹೊರಗೆ ಬರಲೇ ಬೇಕು. ಯುವತಿ ಎಲ್ಲಿಯೇ ಬಂದು ಹೇಳಿಕೆ‌ ನೀಡಿದರು. ಆಕೆಗೆ ರಕ್ಷಣೆ ನೀಡಲು ಕರ್ನಾಟಕ ಸರ್ಕಾರ ಹಾಗೂ ಪೊಲೀಸ್ ಬದ್ದವಾಗಿದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.cd case-DK Shivakumar - name - I'm not –surprised-Minister- ST Somashekhar ...

ಆರು ಸಚಿವರು ಕೋರ್ಟ್ ಗೆ ಹೋಗಿರುವ ವಿಚಾರ ಸಂಬಂಧ ಈ ವಿಚಾರವಾಗಿ ಉಪಚುನಾವಣೆ ಪ್ರಚಾರದಿಂದ ದೂರ ಇರಲು ಸಿಎಂ ಹೇಳಿಲ್ಲ. ನನಗೆ ಸದ್ಯ ಊಟಿಗೆ ಉಸ್ತುವಾರಿ ನೀಡಲಾಗಿದೆ.ನಂತರ ಮಸ್ಕಿಗೆ ನೇಮಕ ಮಾಡಲಾಗಿದೆ. ಪ್ರಚಾರದಿಂದ ದೂರ ಇರಿ ಎಂಬುದೆಲ್ಲ ಕಪೋಲ ಕಲ್ಪಿತ ಸುದ್ದಿ. ನಮಗೆ ಈ ಬಗ್ಗೆ ಸಿಎಂ ಯಾವ ಸೂಚನೆ ನೀಡಿಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್  ಸ್ಪಷ್ಟನೆ ನೀಡಿದರು.

Key words: cd case-DK Shivakumar – name – I’m not –surprised-Minister- ST Somashekhar …