Thursday, September 17, 2026

BDA Apartments

ಸಾಂಸ್ಕೃತಿಕ ನಗರಿ BDA JK_Adv BDA Adv
Home Front Page ಸಾಂಸ್ಕೃತಿಕ ನಗರಿ ಮೈಸೂರಿನಲ್ಲೊಂದು ವಿಶೇಷ ಘಟನೆ: ಗಾಯಗೊಂಡಿದ್ದ ನಾಗರಹಾವಿಗೆ ಅಪರೇಷನ್….

ಸಾಂಸ್ಕೃತಿಕ ನಗರಿ ಮೈಸೂರಿನಲ್ಲೊಂದು ವಿಶೇಷ ಘಟನೆ: ಗಾಯಗೊಂಡಿದ್ದ ನಾಗರಹಾವಿಗೆ ಅಪರೇಷನ್….

ಮೈಸೂರು,ಮೇ,6,2019(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲೊಂದು ವಿಶೇಷ ಘಟನೆ ನಡೆದಿದೆ. ಹೌದು, ಮೈಸೂರಿನಲ್ಲಿ ಗಾಯಗೊಂಡಿದ್ದ ನಾಗರಹಾವಿಗೆ ಆಪರೇಷನ್ ಮಾಡಲಾಗಿದೆ.

ಮೈಸೂರಿನ ಲಲಿತಾದ್ರಿಪುರದಲ್ಲಿ ಕಟ್ಟಡ ಕಾಮಗಾರಿ ವೇಳೆ ನಾಗರಹಾವು ಗಾಯಗೊಂಡಿತ್ತು. ಈ ವೇಳೆ ಸ್ಥಳಕ್ಕಾಗಮಿಸಿದ ಉರುಗ ತಜ್ಞ ಕೆಂಪರಾಜು ನಾಗರಹಾವನ್ನ ರಕ್ಷಣೆ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.

ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಪಶು ಆಸ್ಪತ್ರೆಯಲ್ಲಿ ಗಾಯಗೊಂಡಿದ್ದ ನಾಗರಹಾವಿಗೆ ಅಪರೇಷನ್ ಮಾಡಲಾಗಿದೆ. ಹಾವಿಗೆ ಅನಾಸ್ಟೇಷಿಯಾ ನೀಡಿ ಟ್ರೀಟ್‌ಮೆಂಟ್ ಕೊಡಲಾಗಿದೆ.  ವೈದ್ಯ ಯಶ್ವಂತ್,  ತಿಮ್ಮೇಗೌಡ ಎಂಬುವವರಿಂದ ಹಾವಿಗೆ ಚಿಕಿತ್ಸೆ ನೀಡಿದ್ದು ಇದೀಗ ನಾಗರಹಾವನ್ನ  ಕಾಡಿಗೆ ಬಿಡಲಾಗಿದೆ.

Key words: mysore- special –case-Mysore-Operation – snake