ಸಮಾಜದ ಹಿತದೃಷ್ಟಿಯಿಂದ ತಂಬಾಕು ಉತ್ಪನ್ನಗಳ ಜಾಹೀರಾತನ್ನು ನಿಲ್ಲಿಸಿ: ನಟ ಅಜಯ್ ದೇವಗನ್ ಗೆ ಕ್ಯಾನ್ಸರ್ ಪೀಡಿತ ಅಭಿಮಾನಿ ಮನವಿ

0
348

ಮುಂಬೈ:ಮೇ-6:(www.justkannada.in) ನೆಚ್ಚಿನ ನಟ-ನಟಿಯರು ಪ್ರಚಾರ ಮಾಡುವ ಜಾಹೀರಾತು ಉತ್ಪನ್ನಗಳನ್ನು ತಾವೂ ಬಳಕೆ ಮಾಡಿ ಅದೆಷ್ಟೂ ಅಭಿಮಾನಿಗಳು ಸಂಕಷ್ಟಕ್ಕೀಡಾಗುವ ಘಟನೆಗಳು ಹಲವಾರು. ಜಾಹೀರಾತುಗಳಲ್ಲಿ ಕಾಣಿಸುವ ಕೆಲ ಉತ್ಪನ್ನಗಳನ್ನು ಬಳಸಿ ಅಪಾಯಕ್ಕೀಡಾ ಉದಾಹರಣೆಗಳು ಹಲವಾರು. ಈ ನಡುವೆ ಅಭಿಮಾನಿಯೊಬ್ಬರು ಬಾಲಿವುಡ್ ನಟ ಅಜಯ್ ದೇವಗನ್ ಅವರಿಗೆ ತಂಬಾಕು ಉತ್ಪನ್ನಗಳ ಜಾಹೀರುತುಗಳಲ್ಲಿ ಕಾಣಿಸಿಕೊಳ್ಳಬೇಡಿ. ಸಮಾಜದ ಹಿತದೃಷ್ಟಿಯಿಂದ ತಮ್ಮ ಮನವಿಗೆ ಗಮನಕೊಡುವಂತೆ ವಿನಮ್ರತೆಯಿಂದ ಕೇಳಿಕೊಂಡಿರುವ ಘಟನೆ ನಡೆದಿದೆ.

ಹೌದು. ರಾಜಸ್ಥಾನದ ನಾನಾಕ್ರಮ್‌ ಅಜಯ್ ದೇವಗನ್ ಅವರ ಕಟ್ಟಾ ಅಭಿಮಾನಿ. ಅಜಯ್ ದೇವಗನ್ ಅವರ ತಂಬಾಕು ಉತ್ಪನ್ನದ ಜಾಹೀರಾತನ್ನು ನೋಡಿದ ಆತ ಅದೇ ಉತ್ಪನ್ನವನ್ನು ಬಳಸಲು ಪ್ರರಂಭಿಸಿ ಈಗ ಮಾರಕ ರೋಗ ಕ್ಯಾನ್ಸರ್ ಗೆ ತುತ್ತಾಗಿದ್ದಾರೆ. ಇದರಿಂದ ಎಚ್ಚೆತ್ತ ಆತ ಸಮಾಜದ ಹಿತದೃಷ್ಟಿಯಿಂದ ತಂಬಾಕು ಉತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಬೇಡಿ. ಈ ಜಾಹೀರಾತನ್ನು ನಿಲ್ಲಿಸಿ ಎಂದು ಅಜಯ್ ದೇವಗನ್ ಅವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಸುಮಾರು 1000 ಕರಪತ್ರಗಳಲ್ಲಿ ಅಜಯ್‌ ದೇವಗನ್‌ ಅವರಿಗೆ ಮನವಿ ಮಾಡಲಾಗಿದ್ದು, ತಂಬಾಕು ಉತ್ಪನ್ನಗಳು ಹೇಗೆ ಆತನನ್ನು ಮತ್ತು ಕುಟುಂಬದವರನ್ನು ಕಾಡಿವೆ ಎಂನ್ನುವ ಕುರಿತು ಬರೆಯಲಾಗಿದೆ. ತಂಬಾಕು ಉತ್ಪನ್ನಗಳ ಅಪಾಯದ ಕುರಿತು ಈಗ ಪಾಂಪ್ಲೆಟ್‌ ನ್ನು ಮಾಡಿ, ಅವುಗಳನ್ನು ಜಾಹೀರಾತಿನ ಮೂಲಕ ಉತ್ತೇಜಿಸಬೇಡಿ ಎಂದು ಮನವಿ ಮಾಡಿ, ಸಂಗಾನೇರ್‌, ಜಗತ್‌ಪುರ ಮತ್ತು ನಗರದ ಸಮೀಪದ ಪ್ರದೇಶಗಳಲ್ಲಿ ಈ ಕುರಿತು ಗೋಡೆಗಳಿಗೆ ಬಿತ್ತಿಪತ್ರಗಳನ್ನು ಕೂಡ ಅಂಟಿಸಿದ್ದಾರೆ.

ಈ ಬಗ್ಗೆ ರೋಗಿಯ ಪುತ್ರ ದಿನೇಶ್‌ ಮೀನಾ ಕೂಡ ಹೇಳಿಕೆ ನೀಡಿದ್ದು, ಕೆಲವು ವರ್ಷಗಳ ಹಿಂದೆ ನನ್ನ ತಂದೆ ನಾನಾಕ್ರಮ್‌ ಮೀನಾ ಅವರು ತಂಬಾಕನ್ನು ಜಿಗಿಯಲು ಶುರು ಮಾಡಿದರು ಮತ್ತು ಜಾಹೀರಾತಿನಲ್ಲಿ ಅಜಯ್‌ ದೇವಗನ್‌ ಕಾಣಿಸಿಕೊಳ್ಳುತ್ತಿದ್ದ ಉತ್ಪನ್ನಗಳನ್ನಷ್ಟೇ ಬಳಸುತ್ತಿದ್ದರು. ಅಜಯ್ ದೇವಗನ್‌ ಅವರಿಂದ ಪ್ರಭಾವಿತರಾಗಿದ್ದ ತಂದೆಯವರು ಕ್ಯಾನ್ಸರ್‌ಗೆ ತುತ್ತಾದ ವೇಳೆ ಈ ರೀತಿಯ ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳದಂತೆ ಮನವಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಸಮಾಜದ ಹಿತ ದೃಷ್ಟಿಯಿಂದ ತಂಬಾಕು ಉತ್ಪನ್ನಗಳ ಜಾಹೀರಾತನ್ನು ನಿಲ್ಲಿಸಿ: ನಟ ಅಜಯ್ ದೇವಗನ್ ಗೆ ಕ್ಯಾನ್ಸರ್ ಪೀಡಿತ ಅಭಿಮಾನಿ ಮನವಿ

Ajay Devgn Asked By Cancer Patient To Not Promote Tobacco Products

Nanakram, a 40-year old cancer patient from Rajasthan, has made a public appeal to Bollywood actor Ajay Devgn to stop doing advertisement of tobacco products in the interest of the society