Thursday, August 20, 2026

BDA Apartments

Home Front Page ಇಂದು ಟೀಂ ಇಂಡಿಯಾ-ಇಂಗ್ಲೆಂಡ್ 4ನೇ ಟಿ-20 ಪಂದ್ಯ

ಇಂದು ಟೀಂ ಇಂಡಿಯಾ-ಇಂಗ್ಲೆಂಡ್ 4ನೇ ಟಿ-20 ಪಂದ್ಯ

ಬೆಂಗಳೂರು, ಮಾರ್ಚ್ 18, 2021 (www.justkannada.in): ಇಂದು ನರೇಂದ್ರ ಮೋದಿ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ 4ನೇ ಟಿ20 ಪಂದ್ಯ ನಡೆಯಲಿದೆ. ಟೀಮ್ ಇಂಡಿಯಾ ಪಾಲಿಗೆ ಇದು ಅಳಿವು ಉಳಿವಿನ ಪಂದ್ಯವಾಗಿದೆ.

ಮೊದಲ ಟಿ ಟ್ವೆಂಟಿಯಲ್ಲಿ ಸೋತು 2ನೇ ಟಿಟ್ವೆಂಟಿಯಲ್ಲಿ ಗೆದ್ದು ಬೀಗಿದ ಕೊಹ್ಲಿ ಪಡೆ 3ನೇ ಟಿಟ್ವೆಂಟಿ ಪಂದ್ಯದಲ್ಲಿ ಮತ್ತೊಮ್ಮೆ ಮುಗ್ಗರಿಸಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆದ್ದರಷ್ಟೇ ಪ್ರಶಸ್ತಿ ಕನಸು ಹಾಗೆಯೇ ಉಳಿಯಲಿದೆ.

ಇಂಗ್ಲೆಂಡ್ ಎರಡು ಪಂದ್ಯಗಳಲ್ಲಿ ಟಾಸ್ ಗೆದ್ದು ಗೆಲುವು ದಾಖಲಿಸಿದ್ರೆ, ಟೀಮ್ ಇಂಡಿಯಾ ಒಂದು ಪಂದ್ಯದಲ್ಲಿ ಟಾಸ್ ಗೆದ್ದು ಜಯದ ನಗೆ ಬೀರಿದೆ. ಹೀಗಾಗಿ ಇಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸಲಿದೆ.