Sunday, August 9, 2026

BDA Apartments

Home Front Page ಹೋರಾಟಗಾರ್ತಿ ದಿಶಾ ರವಿ ಬಂಧನಕ್ಕೆ ಡಾ.ಪುಷ್ಪಾ ಅಮರ್ ನಾಥ್ ಖಂಡನೆ: ಬಿಜೆಪಿ ವಿರುದ್ಧ ತೀವ್ರ ಆಕ್ರೋಶ….

ಹೋರಾಟಗಾರ್ತಿ ದಿಶಾ ರವಿ ಬಂಧನಕ್ಕೆ ಡಾ.ಪುಷ್ಪಾ ಅಮರ್ ನಾಥ್ ಖಂಡನೆ: ಬಿಜೆಪಿ ವಿರುದ್ಧ ತೀವ್ರ ಆಕ್ರೋಶ….

ಮೈಸೂರು,ಫೆಬ್ರವರಿ,15,2021(www.justkannada.in): ಹೋರಾಟಗಾರ್ತಿ ದಿಶಾ ರವಿ ಬಂಧನ ಖಂಡಿಸಿರುವ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರ್ ನಾಥ್, ದಿಶಾ ರವಿಗೆ ದೇಶದ್ರೋಹದ ಪಟ್ಟಿ ಕಟ್ಟಿದ್ದೀರಿ. ದೇಶದ ರೈತರ ಪರ ಧ್ವನಿ ಎತ್ತಿದ ದಿಶಾರವಿ ದೇಶದ್ರೋಹಿನಾ..? ಎಂದು ಕೇಂದ್ರ ಸರ್ಕಾರವನ್ನ ಪ್ರಶ್ನಿಸಿದರು.

jk

ಈ ಕುರಿತು ಮೈಸೂರಿನಲ್ಲಿ ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಡಾ.ಪುಷ್ಪ ಅಮರ್ ನಾಥ್,  ದಿಶಾ ರವಿಗೆ ದೇಶದ್ರೋಹದ ಪಟ್ಟಿ ಕಟ್ಟಿದ್ದೀರಿ. ದೇಶದ ರೈತರ ಪರ ಧ್ವನಿ ಎತ್ತಿದ ದಿಶಾರವಿ ದೇಶದ್ರೋಹಿನಾ..? ರೈತರ ಪರ ಧ್ವನಿ‌ ಎತ್ತಿದರೆ ದೇಶ ದ್ರೋಹಾನಾ..? ನನ್ನ ಪ್ರಕಾರ ಬಿಜೆಪಿಯವರೇ ದೇಶದ್ರೋಹಿಗಳು..! ದೇಶದ ಎಲ್ಲಾ ವರ್ಗದ ಸಂತೋಷ ಕಿತ್ತುಕೊಂಡಿರುವ ನೀವು ದೇಶದ್ರೋಹಿಗಳು ಎಂದು ಕಿಡಿಕಾರಿದರು. kpcc –women-unit-president- Dr Pushpa Amar Nath- condemns -arrest – fighter- Disha Ravi

ಹಮ್ದೋ, ಹಮಾಲಿ ದೋ ಸರ್ಕಾರ ಮಾತ್ರ ಸಂತೋಷವಾಗಿದೆ. ನಿಮ್ಮದು ಹಮ್ದೋ, ಸರ್ಕಾರ‌. ನಿಮ್ಮನ್ನ ಮೊದಲು ಅರೆಸ್ಟ್ ಮಾಡಬೇಕು. 200ಕ್ಕೂ ಹೆಚ್ಚು ಜನ ರೈತರನ್ನು ಬಲಿಪಡೆದ ನೀವು ದೇಶದ್ರೋಹಿಗಳು. ರೈತರ ಪರ ನಿಂತುಕೊಳ್ಳೋ ಯೋಗ್ಯತೆ ನಿಮಗಿಲ್ಲ ಎಂದು ಡಾ.ಪುಷ್ಪಾ ಅಮರ್ ನಾಥ್ ಹರಿಹಾಯ್ದರು.

Key words: kpcc –women-unit-president- Dr Pushpa Amar Nath- condemns -arrest – fighter- Disha Ravi