Wednesday, August 12, 2026

BDA Apartments

Home Front Page ಮುಂದುವರೆದ ಜಟಾಪಟಿ: ಶಾಸಕ ಜಿ.ಟಿ.ದೇವೆಗೌಡ ಕುಟುಂಬಕ್ಕೆ ಪರೋಕ್ಷ ಪಂಥಾಹ್ವಾನ ನೀಡಿದ ಸಾ.ರಾ ಮಹೇಶ್..

ಮುಂದುವರೆದ ಜಟಾಪಟಿ: ಶಾಸಕ ಜಿ.ಟಿ.ದೇವೆಗೌಡ ಕುಟುಂಬಕ್ಕೆ ಪರೋಕ್ಷ ಪಂಥಾಹ್ವಾನ ನೀಡಿದ ಸಾ.ರಾ ಮಹೇಶ್..

ಮೈಸೂರು, ಫೆಬ್ರವರಿ,9,2021(www.justkannada.in): ಮೈಸೂರಿನಲ್ಲಿ ಶಾಸಕ ಸಾ.ರಾ.ಮಹೇಶ್ ಮತ್ತು ಜಿ.ಟಿ.ದೇವೆಗೌಡರ ನಡುವಿನ ಜಟಾಪಟಿ ಮುಂದುವರೆದಿದೆ.jk

ಈ ಮಧ್ಯೆ ಹಿಂದೆ ಸಿಎಂ ಅಭ್ಯರ್ಥಿ ಎಂದು‌ ಬಿಂಬಿತವಾದವರನ್ನೇ 22 ಸಾವಿರ ಅಂತರದಲ್ಲಿ ಸೋಲಿಸಿದ್ದೇನೆ. ಕೆ.ಆರ್.ನಗರಕ್ಕೆ ಯಾರೆ ಬಂದು ಸ್ಪರ್ಧಿಸಿದ್ರೂ ಎದುರಿಸಲು ಸಿದ್ಧನಿದ್ದೇನೆ ಎಂದು  ಶಾಸಕ ಜಿ.ಟಿ.ದೇವೆಗೌಡ ಕುಟುಂಬಕ್ಕೆ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಪರೋಕ್ಷವಾಗಿ ಪಂಥಾಹ್ವಾನ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ಸಾ.ರಾ ಮಹೇಶ್,  ಕೆ.ಆರ್.ನಗರಕ್ಕೆ ಅಭಿನಂದನೆಗೆ ಬಂದವರು ರಾಜಕೀಯವಾಗಿ ಬರಲಾರರು. ರಾಜಕೀಯವಾಗಿ ಬಂದ್ರೆ ಅವರನ್ನು ಎದುರಿಸಲು ನಾನು ಸಿದ್ಧ. ಅಭಿನಂಧನೆ, ಹುಟ್ಟುಹಬ್ಬ,‌ಶವಸಂಸ್ಕಾರಕ್ಕೆ ಬಂದವರೆಲ್ಲಾ‌ ರಾಜಕೀಯ ಮಾಡಕ್ಕಾಗಲ್ಲ ಎಂದು ಜಿ.ಟಿ ದೇವೇಗೌಡರಿಗೆ ಟಾಂಗ್ ನೀಡಿದರು.mysore- MLA SARA Mahesh-indirectly –tong-MLA GT Deve Gowda

ಹಿಂದೆ ಸಿಎಂ ಅಭ್ಯರ್ಥಿ ಎಂದು‌ ಬಿಂಬಿತವಾದವರನ್ನೇ 22 ಸಾವಿರ ಅಂತರದಲ್ಲಿ ಸೋಲಿಸಿದ್ದೇನೆ. ಕೆ.ಆರ್.ನಗರಕ್ಕೆ ಯಾರೇ ಬಂದು ಸ್ಪರ್ಧಿಸಿದ್ರೂ ಎದುರಿಸಲು ಸಿದ್ಧನಿದ್ದೇನೆ. ನಮ್ಮ ಕ್ಷೇತ್ರದ ಜನ ನನ್ನನ್ನ ಮೂರು ಬಾರಿ ಆಯ್ಕೆ ಮಾಡಿದ್ದಾರೆ. ಕೆ.ಆರ್ ನಗರದಲ್ಲಿ ಸತತವಾಗಿ ಎರಡು ಬಾರಿ ಯಾರಿಗೂ ಅವಕಾಶವಾಗಿಲ್ಲ. ಅಂತಹದರಲ್ಲಿ ನನ್ನನ್ನ ಮೂರು ಬಾರಿ ಆಯ್ಕೆ ಮಾಡಿದ್ದಾರೆ. ನನ್ನ ಪಕ್ಷ, ನಮ್ಮ ಜನ, ಕಾರ್ಯಕರ್ತರು ಇರುವರೆಗೂ ಯಾವುದಕ್ಕೂ ತೊಂದರೆ ಇಲ್ಲ. ಚುನಾವಣೆ ಬರಲಿ ಆ ಸಂದರ್ಭದಲ್ಲಿ ಯಾವ ಬೆಳವಣಿಗೆ ಇರುತ್ತೋ ನೋಡಣ ಎಂದರು.

Key words: mysore- MLA SARA Mahesh-indirectly –tong-MLA GT Deve Gowda