ರೇಷ್ಮೆ ಹುಳು ಸಾಕಾಣಿಕೆ ತರಬೇತಿಯಿಂದ ವಿದ್ಯಾರ್ಥಿಗಳಲ್ಲಿ ದೃಢಸಂಕಲ್ಪ, ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲು ಸಹಕಾರಿ- ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್…

ಮೈಸೂರು,ಫೆಬ್ರವರಿ,9,2021(www.justkannada.in): ರೇಷ್ಮೆ ಹುಳು ಸಾಕಾಣಿಕೆ ತರಬೇತಿಯಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ದೃಢಸಂಕಲ್ಪ, ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲು ಸಹಕಾರಿಯಾಗುತ್ತದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ನುಡಿದರು.

mysore-university-vc-prof-g-hemanth-kumar-silkworm-rearing-training-student

ಮೈಸೂರು ವಿಶ್ವವಿದ್ಯಾನಿಲಯದ ರೇಷ್ಮೆ ಕೃಷಿ ವಿಜ್ಞಾನ ಅಧ್ಯಯನ ವಿಭಾಗದಲ್ಲಿ ಪ್ರಪ್ರಥಮ ಬಾರಿಗೆ ಕೌಶಲ್ಯಾಭಿವೃದ್ಧಿ ಎಂಬ ವಿಷಯವನ್ನು ಸ್ನಾತಕೋತ್ತರ ಪಠ್ಯಕ್ರಮದಲ್ಲಿ ಅಳವಡಿಸಿದ್ದು, ಈ  ಅಂಗವಾಗಿ ಸುಮಾರು 25 ದಿನಗಳ ಕಾಲ ರೇಷ್ಮೆ ಹುಳು ಸಾಕಾಣಿಕೆಯಲ್ಲಿ ತರಬೇತಿಯನ್ನು  ಆಯೋಜಿಸಿತ್ತು.

ಈ ಕೌಶಲ್ಯಾಭಿವೃದ್ಧಿ ಪಠ್ಯಕ್ರಮದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದಲ್ಲಿ ತರಬೇತಿ ಕೊಡುವುದಕ್ಕಾಗಿ ರೇಷ್ಮೆ ಹುಳು FC1′ ಎಂಬ ತಳಿಯ ಸುಮಾರು 40 ಮೊಟ್ಟೆಗಳ ಹುಳುಗಳನ್ನು ಚಾಕಿ ಕಟ್ಟುವುದರಿಂದ ಹಿಡಿದು, ರೇಷ್ಮೆ ಗೂಡು ಕಟ್ಟುವವರೆವಿಗೂ ಸಾಕಾಣಿಕೆ ಮಾಡಿಲಾಗಿದೆ.

ಈ ಹಿನ್ನೆಲೆಯಲ್ಲಿ ಮೈಸೂರು ವಿವಿ ಕುಲಪತಿ ಪ್ರೊ. ಜಿ. ಹೇಮಂತ ಕುಮಾರ್ ಅವರು ರೇಷ್ಮೆ ಕೃಷಿ ಅಧ್ಯಯನ ವಿಭಾಗಕ್ಕೆ ಭೇಟಿ ನೀಡಿ ತರಬೇತಿ ನಿರತ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು. ಸಂವಾದದ ವೇಳೆ ತರಬೇತಿ ನಿರತ ವಿದ್ಯಾರ್ಥಿಗಳು, ಒಂದು ತಿಂಗಳ ಕೌಶಲ್ಯಾಭಿವೃದ್ಧಿ ತರಬೇತಿಯ ತಮ್ಮ ಅನುಭವಗಳನ್ನು ಮತ್ತು ತರಬೇತಿಯ ಸಾರ್ಥಕತೆಯನ್ನು  ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಅವರ ಜತೆ ಹಂಚಿಕೊಂಡರು.

ಈ ವೇಳೆ ಮಾತನಾಡಿದ ಪ್ರೊ. ಜಿ. ಹೇಮಂತ್ ಕುಮಾರ್,  ಈ ತರಬೇತಿಯಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ದೃಢಸಂಕಲ್ಪ ರೈತರಿಗೆ ಸೂಕ್ತ ಮಾರ್ಗದರ್ಶನವನ್ನು ರೇಷ್ಮೆ ಹುಳು ಸಾಕಾಣಿಕೆಯಲ್ಲಿ ನೀಡಲು ಸಹಕಾರಿಯಾಗುತ್ತದೆ. ರೈತರಿಗೆ ಸೂಕ್ತ ತರಬೇತಿ ನೀಡಲು ಕೌಶಲ್ಯಾಧಾರಿತ ನುರಿತ ವಿದ್ಯಾರ್ಥಿಗಳ ಅವಶ್ಯಕತೆ ಸಮಾಜಕ್ಕೆ ಇದೆ. ಈ ನಿಟ್ಟಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಮುಂಚೂಣಿಯಲ್ಲಿದೆ.  ಮತ್ತು ವಿಶ್ವವಿದ್ಯಾನಿಲಯದ ರೇಷ್ಮೆ ಕೃಷಿ ಅಧ್ಯಯನ ವಿಭಾಗವು ಪ್ರಪ್ರಥಮ ಬಾರಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಇದಕ್ಕೆ ಕಾರಣವಾದ ರೇಷ್ಮೆ ಹುಳು ಸಾಕಾಣಿಕೆಯ ನೇತೃತ್ವ ವಹಿಸಿದ್ದ ಪ್ರೊ, ಹೆಚ್.ಬಿ. ಮಂಜುನಾಥ್ ಅವರನ್ನು ಹಾಗೂ ಬೋಧಕ ಮತ್ತು ಬೋಧಕೇತರ ವರ್ಗದವರನ್ನು ಅಭಿನಂದಿಸಿದರು.mysore university-VC- Prof. G. Hemanth Kumar -Silkworm -rearing –training-student

ವಿದ್ಯಾರ್ಥಿಗಳು ಈ ರೀತಿ ಬೆಳೆದ ಒಂದು ಕೆ.ಜಿ. ರೇಷ್ಮೆಗೂಡಿಗೆ ರೂ. 800/-ಗಳು ಸಂದಾಯವಾಗಿರುವುದರಿಂದ ಎಲ್ಲರನ್ನು ಪ್ರಶಂಸಿಸಿದ ಹೇಮಂತ್ ಕುಮಾರ್ ,  ಇನ್ನೂ ಮುಂದೆ ಇಂತಹ ಕಾರ್ಯಕ್ರಮಗಳಿಗೆ ಬೇಕಾಗುವ ಸವಲತ್ತುಗಳನ್ನು ಒದಗಿಸಿಕೊಡುವುದಾಗಿ ಭರವಸೆಯನ್ನು ನೀಡಿದರು.

ENGLISH SUMMARY…

Training in silk worm farming will help students in building determination, provide proper guidance to farmers: UoM VC
Mysuru, Feb. 9, 2021 (www.justkannada.in): “Training in silkworm farming will help the students in building determination, and provide proper guidance to the farmers,” opined Prof. G. Hemanth Kumar, Vice-Chancellor, University of Mysore.
Skill development subject has been included for the first time in the PG curriculum, at the Sericulture Science Research Department, at the University of Mysore. A 25-day duration training program in silk worm farming was organized as part of this.
To provide training to the students who are pursuing post-graduation, under the subject Skill Development entire process of sericulture and silkworm farming is being provided, starting from laying eggs to growing cocoons.mysore university-VC- Prof. G. Hemanth Kumar -Silkworm -rearing –training-student
On the occasion, he also informed that the cocoons grown by the students had fetched a sum of Rs. 800/- per kg and appreciated their efforts. He assured to provide all required facilities in the future for such programs.
Keywords: Training/ Silk Worm farming/ University of Mysore/ Sericulture/ Skill development

Key words: mysore university-VC- Prof. G. Hemanth Kumar -Silkworm -rearing –training-student