Monday, October 5, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Front Page “ತವರಿಗೆ ಮರಳಿದ ಶಶಿಕಲಾಗೆ ಅದ್ಧೂರಿ ಸ್ವಾಗತ”

“ತವರಿಗೆ ಮರಳಿದ ಶಶಿಕಲಾಗೆ ಅದ್ಧೂರಿ ಸ್ವಾಗತ”

ಬೆಂಗಳೂರು,ಫೆಬ್ರವರಿ,08,2021(www.justkannada.in) : ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ತಮಿಳುನಾಡಿಗೆ ಮರಳಿದ ಶಶಿಕಲಾಗೆ ಅದ್ಧೂರಿ ಸ್ವಾಗತ ದೊರೆತಿದೆ.jkಜನವರಿ 4ರಂದು ಬಿಡುಗಡೆಯಾಗಿದ್ದು, ಇಂದು ಬೆಳಗ್ಗೆ ರೆಸಾರ್ಟ್‍ನಿಂದ ತಮಿಳುನಾಡಿಗೆ ಹೊರಡುತ್ತಿದ್ದಂತೆಯೇ ಅಭಿಮಾನಿಗಳು ಹೂವಿನ ಸುರಿಮಳೆಗರೆದು ಅದ್ಧೂರಿಯಾಗಿ ಸ್ವಾಗತಿಸಿದರು.

ಮಡಿವಾಳ, ಸಿಲ್ಕ್‍ಬೋರ್ಡ್ ಮೂಲಕ ಕರ್ನಾಟಕ ಪೊಲೀಸರು ಬಿಗಿಭದ್ರತೆಯಲ್ಲಿ ಶಶಿಕಲಾ ಅವರನ್ನು ಅತ್ತಿಬೆಲೆ ಬಳಿಯ ತಮಿಳುನಾಡಿನ ಗಡಿವರೆಗೂ ಕರೆತಂದರು. ಗಡಿಯಲ್ಲೇ ಕಾದು ನಿಂತಿದ್ದ ಸಾವಿರಾರು ಕಾರ್ಯಕರ್ತರು, ಮಹಿಳೆಯರು ಪೂರ್ಣಕುಂಭ ಹಿಡಿದು ಚಿನ್ನಮ್ಮಗೆ ಭವ್ಯ ಸ್ವಾಗತ ನೀಡಿದ್ದಾರೆ ಎಂದು ತಿಳಿದು ಬಂದಿದೆ.Welcome-back-home-Sasikalaನಿರೀಕ್ಷೆಗೂ ಮೀರಿ ಜಮಾಯಿಸಿದ್ದ ಜನರು ಚಿನ್ನಮ್ಮ ಪರ ಘೋಷಣೆಗಳನ್ನು ಕೂಗಿ ದಾರಿಯುದ್ದಕ್ಕೂ ಹೂಮಳೆಗರೆದಿದ್ದಾರೆ.

key words : Welcome-back-home-Sasikala