ಎಂಎಸ್ ಪಿಯಲ್ಲಿ ಯಾವುದೇ ಬದಲಾವಣೆ ಇಲ್ಲ: ಪ್ರಧಾನಿ ಮೋದಿ ಸ್ಫಷ್ಟನೆ….

ನವದೆಹಲಿ,ಫೆಬ್ರವರಿ,8,2021(www.justkannada.in): ಎಂಎಸ್ ಪಿ ಇತ್ತು. ಎಂಎಸ್ ಪಿ ಇದೆ. ಎಂಎಸ್ ಪಿ ಮುಂದೆಯೂ ಇರಲಿದೆ.  ಎಂಎಸ್‌ಪಿಯಲ್ಲಿ ಯಾವುದೇ ಬದಲಾವಣೆಯ ಇಲ್ಲ  ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಿದ್ದಾರೆ. jk

ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯಕ್ಕೆ  ಸಂಬಂಧಿಸಿದಂತೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರೈತರ ಆಂದೋಲನದ ಬಗ್ಗೆ ಸದನದಲ್ಲಿ ಚರ್ಚೆ ನಡೆಯಿತು. ಆದ್ರೆ ಏಕೆ ಹೋರಾಟ ಮಾಡುತ್ತಿದ್ದಾರೆ ಎಂಬುದನ್ನೇ ಹೇಳಲಿಲ್ಲ. ರೈತರಿಗೆ 90 ಸಾವಿರ ಕೋಟಿ ರೂಪಾಯಿಯನ್ನ ನೀಡಲಾಗಿದೆ. ರೈತರ ಖಾತೆಗೆ  ನೇರವಾಗಿ ಹಣ ವರ್ಗಾವಣೆಯಾಗಿದೆ ಎಂದರು.no change –MSP-Prime Minister –narendra Modi -clarified.

ರೈತರು ತಮ್ಮ ಹೋರಾಟ ವಾಪಸ್ ಪಡೆಯುವಂತೆ  ಮನವಿ ಮಾಡಿದ ಪ್ರಧಾನಿ ನರೇಂದ್ರ ಮೋದಿ,  ಕಾಯ್ದೆಗಳಲ್ಲಿರುವ ನ್ಯೂನ್ಯತೆ ಸರಿಪಡಿಸುತ್ತೇವೆ. ದೇಶದ ರೈತರ ಕಷ್ಟಗಳನ್ನ ದೂರ ಮಾಡಬೇಕಿದೆ.  ರೈತರ ಜತೆ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದೇವೆ. ಎಂಎಸ್ ಪಿ ಇತ್ತು, ಈಗಲೂ ಇದೆ, ಮುಂದೆಯೂ ಇರಲಿದೆ. ಕನಿಷ್ಟ ಬೆಂಬಲ ಬೆಲೆ ಬಗ್ಗೆ ಯಾವುದೇ ಆತಂಕ ಬೇಡ ಎಂದರು.

ದೇವೇಗೌಡರ ಜೀವನ ರೈತರಿಗೆ ಅರ್ಪಿತವಾಗಿದೆ…

ದೇವೇಗೌಡರ ಜೀವನ ರೈತರಿಗೆ ಅರ್ಪಿತವಾಗಿದೆ. ದೇವೇಗೌಡರು ಉತ್ತಮ ಸಲಗೆಗಳನ್ನ ನೀಡಿದ್ದಾರೆ. ದೇವೇಗೌಡರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಪ್ರಧಾನಿ ಮೋದಿ ತಿಳಿಸಿದರು.

Key words: no change –MSP-Prime Minister –narendra Modi -clarified.