“ಸಾಲಬಾಧೆ: ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ”

ಮೈಸೂರು,ಫೆಬ್ರವರಿ,08,2021(www.justkannada.in) : ಸಾಲಬಾಧೆ ತಾಳಲಾರದೆ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಶರಣಾಗಿದ್ದಾರೆ.jk

ಜಿಲ್ಲೆಯ ಹುಣಸೂರು ತಾಲೂಕಿನ ಹರಳಹಳ್ಳಿ ಗ್ರಾಮದ ನಿವಾಸಿ ಕೃಷ್ಣೇಗೌಡ(65) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

3.10 ಎಕರೆ ಜಮೀನು ಹೊಂದಿದ್ದ ಕೃಷ್ಣೇಗೌಡ ಅವರು ತಂಬಾಕು ಜೋಳ ಮತ್ತು ರಾಗಿ ಬೆಳೆ ಬೆಳೆದಿದ್ದರು. ಹನಗೋಡು ಬ್ಯಾಂಕಿನಲ್ಲಿ 4 ಲಕ್ಷ ಸಾಲ ಪಡೆದಿದ್ದರು. ಒಡವೆ ಸಾಲ 1.54 ಲಕ್ಷ ಹಾಗೂ 4 ಲಕ್ಷ ಕೈಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

“ಬೆಳೆದ ಬೆಳೆಗೆ ಬೆಲೆ ಇಲ್ಲ, ಸಾಲ ತೀರಿಸಲು ಸಾಧ್ಯವಾಗಿಲ್ಲ”Mysore-district- soldier-death-heart attack

ಕಳೆದ ವರ್ಷ ಅತಿಯಾದ ಮಳೆ.ಈ ಬಾರಿ ಕೊರೊನಾ ಹಿನ್ನೆಲೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲದೆ ಕಂಗಾಲಾಗಿದ್ದರು. ಸಾಲ ತೀರಿಸಲು ಸಾಧ್ಯವಾಗದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

key words : Impact-Debt-Sterilization-Eat-Farmer-suicide