Sunday, August 23, 2026

BDA Apartments

Home Cinema ಕೆಜಿಎಫ್ ‘ಗರುಡ’ ಮಲೆಯಾಳಂ, ತೆಲಗಿನಲ್ಲೂ ಫುಲ್ ಬ್ಯುಸಿ !

ಕೆಜಿಎಫ್ ‘ಗರುಡ’ ಮಲೆಯಾಳಂ, ತೆಲಗಿನಲ್ಲೂ ಫುಲ್ ಬ್ಯುಸಿ !

ಬೆಂಗಳೂರು, ಜನವರಿ 27, 2021 (www.justkannada.in): ಕೆಜಿಎಫ್ ಚಿತ್ರದ ಗರುಡ ಪಾತ್ರಧಾರಿ ರಾಮ್ ಅವರಿಗೆ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

ಕೆಲ ತಿಂಗಳ ಹಿಂದೆಯಷ್ಟೇ ತಮಿಳು ಸ್ಟಾರ್‌ ನಟರಾದ ಕಾರ್ತಿ, ಜಯಂ ರವಿ ಅವರ ಜತೆ ನಟಿಸಿದ್ದ ರಾಮ್‌ ಈಗ ಮಲಯಾಳಂನ ಸೂಪರ್‌ ಸ್ಟಾರ್‌ ಮೋಹನ್‌ಲಾಲ್‌ ಜತೆಗೂ ಸ್ಕ್ರೀನ್ ಶೇರ್ ಮಾಡಿದ್ದಾರೆ.

ಮೋಹನಲ್‌ಲಾಲ್‌ ಮತ್ತು ಉನ್ನಿಕೃಷ್ಣನ್‌ ಕಾಂಬಿನೇಶನ್‌ನ ‘ಆರಾಟ್ಟು’ ಸಿನಿಮಾದಲ್ಲಿ ರಾಮ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ನಾನು ಸೂಪರ್‌ ಸ್ಟಾರ್‌ ಜತೆ ನಟಿಸುತ್ತಿದ್ದೇನೆ ಎಂದು ಅನಿಸಲೇ ಇಲ್ಲ. ಅವರೊಬ್ಬ ಸರಳ ಜೀವಿ’ ಎಂದು ಮೋಹನ್ ಲಾಲ್ ಜತೆಗಿನ ನಟನೆಯ ಅನುಭವ ಹಂಚಿಕೊಂಡಿದ್ದಾರೆ ರಾಮ್‌.