Monday, August 24, 2026

BDA Apartments

Home Front Page ರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನ ಬೆಂಬಲಿಸಿ ಅಚ್ಚರಿ ಮೂಡಿಸಿದ ಪ್ರೊ. ಕೆ.ಎಸ್. ಭಗವಾನ್…

ರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನ ಬೆಂಬಲಿಸಿ ಅಚ್ಚರಿ ಮೂಡಿಸಿದ ಪ್ರೊ. ಕೆ.ಎಸ್. ಭಗವಾನ್…

ಮೈಸೂರು,ಜನವರಿ,16,2021(www.justkannada.in): ಶ್ರೀರಾಮನ ಅಸ್ತಿತ್ವದ ಬಗ್ಗೆ ಪದೇ ಪದೇ ಟೀಕಿಸಿ ವಿವಾದ ಸೃಷ್ಟಿಸುತ್ತಿದ್ದ ವಿಚಾರವಾದಿ  ಪ್ರೊ.ಕೆ.ಎಸ್ ಭಗವಾನ್ ಇದೀಗ ರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನ ಬೆಂಬಲಿಸಿ ಅಚ್ಚರಿ ಮೂಡಿಸಿದ್ದಾರೆ.jk-logo-justkannada-mysore

ಹೌದು, ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಡೆಸಲಾಗುತ್ತಿರುವ ರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನವನ್ನ  ವಿಚಾರವಾದಿ ಕೆ.ಎಸ್. ಭಗವಾನ್ ಬೆಂಬಲಿಸಿದ್ದಾರೆ.  ಮೈಸೂರಿನ ಕುವೆಂಪುನಗರದ ಮನೆಗೆ ತೆರಳಿದ ಆರ್ ಎಸ್ ಎಸ್ ಕಾರ್ಯಕರ್ತರು,  ನಿಧಿ ಸಮರ್ಪಣಾ ಅಭಿಯಾನದ ಮಾಹಿತಿ ಪುಸ್ತಿಕೆ ನೀಡಿದರು.  ಆರ್ ಎಸ್ ಎಸ್ ಕಾರ್ಯಕರ್ತರ ಜೊತೆ ಸೌಜನ್ಯತೆಯಿಂದ ವರ್ತಿಸಿದ ಕೆ.ಎಸ್. ಭಗವಾನ್, ನಿಧಿ ಸಮರ್ಪಣಾ ಅಭಿಯಾನ ಮುಂದುವರಿಯಲಿ, ಆದಷ್ಟು ಬೇಗ ಅಭಿಯಾನ ಮುಗಿಸಿ ಅಂತಾ ಸಲಹೆ ನೀಡಿದರು.mysire- Prof.KS Bhagavan- Rama Janmabhoomi funded the Dedication Campaign- support

ಶ್ರೀರಾಮ ಅಸ್ತಿತ್ವದ ಬಗ್ಗೆ ಪದೇ ಪದೇ ಟೀಕಿಸಿ ವಿವಾದ ಸೃಷ್ಟಿಸಿದ್ಧ ಪ್ರೊ. ಕೆ.ಎಸ್ ಭಗವಾನ್ ಸಂಘ ಪರಿವಾರದ ಅಭಿಯಾನಕ್ಕೆ ನೈತಿಕ ಬೆಂಬಲ ಸೂಚಿಸಿ ಅಚ್ಚರಿ ಮೂಡಿಸಿದ್ದಾರೆ. ಕಾಶ್ಮೀರದದಲ್ಲಿನ 370ನೇ ವಿಧಿ ರದ್ದು ಮಾಡಿದ್ದ ಪ್ರಧಾನಿ ಮೋದಿಯನ್ನ ಕೆ.ಎಸ್. ಭಗವಾನ್ ಬೆಂಬಲಿಸಿದ್ದರು.

Key words: mysire- Prof.KS Bhagavan- Rama Janmabhoomi funded the Dedication Campaign- support