ಫೆಬ್ರವರಿ 6 ರಂದು ಮಡಿಕೇರಿಗೆ ಬರಲಿದ್ದಾರೆ ರಾಷ್ಟ್ರಪತಿ ರಾಮನಾಥ್ ಕೋವಿಂದ್….

ಕೊಡಗು,ಜನವರಿ,16,2021(www.justkannada.in):  ಜನರಲ್ ತಿಮ್ಮಯ್ಯ ಮ್ಯೂಸಿಯಮ್ ಉದ್ಘಾಟನೆಗಾಗಿ ಫೆಬ್ರವರಿ 6 ರಂದು ರಾಷ್ಟ್ರಪತಿ ರಮನಾಥ್ ಕೋವಿಂದ್ ಮಡಿಕೇರಿಗೆ  ಆಗಮಿಸಲಿದ್ದಾರೆ.jk-logo-justkannada-mysore

ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ ನಿರ್ಮಾಣವಾಗಿದ್ದು, ಜನರಲ್ ತಿಮ್ಮಯ್ಯ ಹುಟ್ಟಿದ ಮನೆ ಸನ್ನಿ  ಸೈಡ್ ನಲ್ಲಿ ಅಪೂರ್ವ ಮ್ಯೂಸಿಯಮ್ ಗಮನ ಸೆಳೆಯಲಿದೆ. ಫೆಬ್ರವರಿ 6 ರಂದು ಮಧ್ಯಾಹ್ನ 3,15 ರಿಂದ ಸಂಜೆ 4 ಗಂಟೆ ವರೆಗೆ ಮ್ಯೂಸಿಯಮ್ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಅಂದು ವೀರ ಸೇನಾನಿ ತಿಮ್ಮಯ್ಯ ಮ್ಯೂಸಿಯಮ್ ಅನ್ನ  ರಾಷ್ಟ್ರಪತಿ ರಮನಾಥ್ ಕೋವಿಂದ್ ಲೋಕಾರ್ಪಣೆ  ಮಾಡಲಿದ್ದಾರೆ.

general-timmaiah-museum-inauguration-president-ramanath-kovind-madikeri
ಕೃಪೆ- internet

ಫೀಲ್ಡ್ ಮಾರ್ಷಲ್ ಕಾರ್ಯಪ್ಪ -ಜನರಲ್ ತಿಮ್ಮಯ್ಯ ಫೋರಮ್  ಅಧ್ಯಕ್ಷ ಕೆ.ಸಿ. ಸುಬ್ಬಯ್ಯ  ಆಹ್ವಾನದ ಮೇರೆಗೆ ಕೊಡಗಿಗೆ ದೇಶದ ಪ್ರಥಮ ಪ್ರಜೆ ಆಗಮಿಸುತ್ತಿದ್ದು, ಇದು ಕೊಡಗಿನ ಪಾಲಿಗೆ ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದೆ. ಫೆಬ್ರವರಿ 6 ರಂದು ಮಡಿಕೇರಿಗೆ ಬರಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈಗಾಗಲೇ ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: General Timmaiah Museum – inauguration- President Ramanath Kovind -Madikeri