Sunday, September 20, 2026

BDA Apartments

Home Front Page “ಆಫ್ ಲೈನ್ ಪರೀಕ್ಷೆ ಬೇಡ, ಆನ್ ಲೈನ್ ಪರೀಕ್ಷೆ ಬೇಕು” : ವಿದ್ಯಾರ್ಥಿಗಳೊಂದಿಗೆ ವಾಟಾಳ್ ನಾಗರಾಜ್...

“ಆಫ್ ಲೈನ್ ಪರೀಕ್ಷೆ ಬೇಡ, ಆನ್ ಲೈನ್ ಪರೀಕ್ಷೆ ಬೇಕು” : ವಿದ್ಯಾರ್ಥಿಗಳೊಂದಿಗೆ ವಾಟಾಳ್ ನಾಗರಾಜ್ ಪ್ರತಿಭಟನೆ

ಮೈಸೂರು,ಜನವರಿ,15,2021(www.justkannada.in) : ಆಫ್ ಲೈನ್ ಪರೀಕ್ಷೆ ಬೇಡ, ಆನ್ ಲೈನ್ ಪರೀಕ್ಷೆ ಬೇಕು ಎನ್ನುವುದು ರಾಜ್ಯದ ವಿದ್ಯಾರ್ಥಿಗಳ ಬೇಡಿಕೆ. ಸರ್ಕಾರ ವಿದ್ಯಾರ್ಥಿಗಳ ಬೇಡಿಕೆಗೆ ಮಾನ್ಯತೆ ನೀಡಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.jk-logo-justkannada-mysoreನಗರದ ಆರ್ ಗೇಟ್ ಬಳಿ ವಾಟಾಳ್ ನಾಗರಾಜ್ ವಿದ್ಯಾರ್ಥಿಗಳೊಂದಿಗೆ ಜಮಾವಣೆಗೊಂಡು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.revoke-maratha-authoritys-order-kannada-okkuta-vatal-nagaraj-mysore-protests-tomorrowಆನ್ ಲೈನ್ ಪರೀಕ್ಷೆ ಬೇಕು ಎನ್ನುವುದು ವಿದ್ಯಾರ್ಥಿಗಳ ಬೇಡಿಕೆಯಾಗಿದ್ದು, ಸರಕಾರ ಇವರ ಬೇಡಿಕೆಗೆ ಮಾನ್ಯತೆ ನೀಡಬೇಕು. ವಿದ್ಯಾರ್ಥಿಗಳ ಜೊತೆ ನಾನು ಯಾವಾಗಲೂ ಇರ್ತೀನಿ. ನೀವು ಒಂದು ಒಕ್ಕೂಟ ಮಾಡಿ ನನಗೆ ತಿಳಿಸಿ ನಾನು ಬರುತ್ತೇನೆ. ನಿಮ್ಮ ಜೊತೆ ನಾನಿದ್ದೀನಿ, ಧೈರ್ಯವಾಗಿ ಇರಿ. ರಾಜ್ಯಾದ್ಯಂತ ಆನ್ ಲೈನ್ ಬಗ್ಗೆ ಹೋರಾಟ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

key words : No off-line-test-Online-test-required-students-Vatal Nagaraj-protests