Sunday, September 20, 2026

BDA Apartments

ಸಂಪುಟ ವಿಸ್ತರಣೆ ಎಲ್ಲವೂ ಮುಗಿದ ಅಧ್ಯಾಯ- ದಿನೇಶ್ ಗುಂಡೂರಾವ್ BDA JK_Adv BDA Adv
Home Front Page ಸಂಪುಟ ವಿಸ್ತರಣೆ ಎಲ್ಲವೂ  ಮುಗಿದ ಅಧ್ಯಾಯ- ದಿನೇಶ್ ಗುಂಡೂರಾವ್

ಸಂಪುಟ ವಿಸ್ತರಣೆ ಎಲ್ಲವೂ  ಮುಗಿದ ಅಧ್ಯಾಯ- ದಿನೇಶ್ ಗುಂಡೂರಾವ್

ಬೆಂಗಳೂರು,ಆಗಸ್ಟ್,6,2026 (www.justkannada.in):  ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ ಕಾಂಗ್ರೆಸ್ ನಲ್ಲಿ ಮಂತ್ರಿಗಿರಿ ಕೈತಪ್ಪಿದ ಶಾಸಕರ ಅಸಮಾಧಾನ ಭುಗಿಲೆದ್ದಿದ್ದು ಈ ಕುರಿತು ಮಾತನಾಡಿರುವ ಮಾಜಿ ಸಚಿವ ದಿನೇಶ್ ಗುಂಡೂರಾವ್ ಸಂಪುಟ ವಿಸ್ತರಣೆ ಎಲ್ಲವೂ  ಮುಗಿದ ಅಧ್ಯಾಯ ಎಂದಿದ್ದಾರೆ.

ಇಂದು ಮಾಜಿ ಸಚಿವ ಹೆಚ್ ಕೆ ಪಾಟೀಲ್ ಅವರನ್ನ ಭೇಟಿಯಾಗಿ ಚರ್ಚಿಸಿದ ಬಳಿಕ ಮಾಧ್ಯಮಗಳ ಜೊತೆ ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿದರು.ಸಂಪುಟ ವಿಸ್ತರಣೆ ಎಲ್ಲವೂ ಮುಗಿದ ಅಧ್ಯಾಯ hk patil

ಸಂಪುಟ ವಿಸ್ತರಣೆ ಎಲ್ಲವೂ  ಮುಗಿದ ಅಧ್ಯಾಯ. ನಾವು ಪಕ್ಷದ ಅಧ್ಯಕ್ಷನಾಗಿ  ಮಂತ್ರಿಗಳಾಗಿ ಕೆಲಸ ಮಾಡಿದ್ದೇವೆ  ಶಾಸಕನಾಗಿ ಕ್ಷೇತ್ರದ ಅಭಿವೃದ್ದಿಯಲ್ಲಿ ಮುಂಚೂಣಿಯಲ್ಲಿರುತ್ತೇವೆ. ನಿನ್ನೆ ಹೆಚ್ ಕೆ ಪಾಟೀಲ್ ರನ್ನು ಭೇಟಿ ಮಾಡುವುದಕ್ಕೆ ಬಂದಿದ್ದೆ. ಹರಿ ಪ್ರಸಾದ್ ಎಲ್ಲಾ ಬಂದಿದ್ದರು ಅಂತ ನಾನು ಮಾತನಾಡಿರಲಿಲ್ಲ. ಇಂದು ಮತ್ತೆ ಬಂದು ಹೆಚ್ ಕೆ ಪಾಟೀಲ್ ರನ್ನು ಭೇಟಿ ಮಾಡಿದ್ದೇನೆ ಎಂದರು.ದಿನೇಶ್ ಗುಂಡೂರಾವ್ jk02_new jk02 new

ಗೌರವಯತವಾಗಿ ನಡೆಸಿಕೊಳ್ಳಬೇಕೆಂದು ಈಗಾಗಲೇ ಹೇಳಿದ್ದೇನೆ.  ಎಲ್ಲಾ ಶಾಸಕರನ್ನು ನಾಯಕರು ಭೇಟಿ ಮಾಡುತ್ತಿರೋದು ಒಳ್ಳೆಯದು  ಎಂದು ದಿನೇಶ್ ಗುಂಡೂರಾವ್  ತಿಳಿಸಿದರು.

Key words: Cabinet expansion, finished chapter, Dinesh Gundu Rao